Saturday, December 14, 2024
Homeಅಪಘಾತನಾಳೆಯೇ ಸಿನಿಮಾ ರಿಲೀಸ್‌ ಆಗಬೇಕಿತ್ತು… ಖುಷಿಯಲ್ಲಿದ್ದ ʻಕನ್ನಡತಿʼ ಧಾರಾವಾಹಿ ಖ್ಯಾತಿಯ ನಟ ಕಿರಣ್‌ ರಾಜ್‌ ಕಾರು...

ನಾಳೆಯೇ ಸಿನಿಮಾ ರಿಲೀಸ್‌ ಆಗಬೇಕಿತ್ತು… ಖುಷಿಯಲ್ಲಿದ್ದ ʻಕನ್ನಡತಿʼ ಧಾರಾವಾಹಿ ಖ್ಯಾತಿಯ ನಟ ಕಿರಣ್‌ ರಾಜ್‌ ಕಾರು ಅಪಘಾತ

ಕನ್ನಡದ ಮೋಸ್ಟ್ ಹ್ಯಾಂಡ್ಸಮ್ ನಟರಲ್ಲಿ ಟಾಪ್ ಲಿಸ್ಟ್​ನಲ್ಲಿ​ರುವ, ʻಕನ್ನಡತಿʼ ಧಾರಾವಾಹಿ ಮೂಲಕ ಇಡೀ ಕನ್ನಡಿಗರ ಮನೆ-ಮನ ಗೆದ್ದ ನಟ ಕಿರಣ್​​​ ರಾಜ್ ಕಾರಿಗೆ ಅಪಘಾತವಾಗಿದೆ. ನಟ ಕಿರಣ್‌ ರಾಜ್‌ ನಟನೆಯ ಬಹುನಿರೀಕ್ಷಿತ ಚಿತ್ರ ʻರಾನಿʼ ನಾಳೆ ರಾಜ್ಯಾದ್ಯಂತ ರಿಲೀಸ್​ ಆಗುತ್ತಿದೆ. ಆದರೆ ಇದರ ನಡುವೆ ನಟನ​ ಕಾರಿಗೆ ಅಪಘಾತವಾಗಿದೆ.
ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದ ಪರಿಣಾಮ ಕಿರಣ್ ರಾಜ್ ಅವರ ಎದೆಯ ಭಾಗಕ್ಕೆ ಗಂಭೀರವಾಗಿ ಪೆಟ್ಟು ಬಿದ್ದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ನಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತಕ್ಕಿಡಾದ ಕಾರು ಫುಲ್​ ಜಖಂಗೊಂಡಿದೆ. ಕಾರಿನ ಚಕ್ರ ಕಿತ್ತುಬಂದಿದೆ. ನಟ ಕಿರಣ್​ ರಾಜ್​ ಜೊತೆಯಲ್ಲಿದ್ದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಸೀಟ್ ಬೆಲ್ಟ್ ಇಂದ ಸೇಫ್ ಆಗಿದ್ದಾರೆ.
ಕನ್ನಡತಿ ಸೀರಿಯಲ್ ಮುಕ್ತಾಯದ ಬಳಿಕ ಬೆಳ್ಳಿ ತೆರೆ ಕಡೆ ಮುಖ ಮಾಡಿರೋ ಕನ್ನಡತಿ ಹೀರೋ ಕಿರಣ್‌ ರಾಜ್ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಆಕ್ಟೀವ್​ ಆಗಿದ್ದರು. ತಮ್ಮ ಮುಂದಿನ ಸಿನಿಮಾದ ಬಗ್ಗೆ ಅಪ್ಡೇಟ್ಸ್ ಕೊಡುತ್ತಿದ್ದ ನಟನಿಗೆ ಗಂಭೀರ ಪೆಟ್ಟಾಗಿದೆ. ಇತ್ತೀಚೆಗಷ್ಟೇ ದಕ್ಷಿಣ ಭಾರತದ ಪ್ರತಿಷ್ಠಿತ ಪ್ರಶಸ್ತಿ ಸೈಮಾ ಸಮಾರಂಭಕ್ಕೆ ಎಂಟ್ರಿ ಕೊಟ್ಟಿದ್ದ ನಟ ಕಿರಣ್ ಹೊಸ ಲುಕ್​ಗೆ ಫ್ಯಾನ್ಸ್​ ಫುಲ್ ಫಿದಾ ಆಗಿದ್ದರು. ಅದರಲ್ಲೂ ಹುಡುಗಿಯರು ಸಾಕಷ್ಟು ಕಾಮೆಂಟ್ಸ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.
ಕಿರಣ್‌ ರಾಜ್ ಹೊಸ ಸಿನೆಮಾದ ಟ್ರೇಲರ್ ನೋಡಿದ್ದ ಅಭಿಮಾನಿಗಳು​ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಗ್ಯಾಂಗ್​ಸ್ಟರ್​ ಕಥೆಯಲ್ಲಿ ಡಾನ್​ ಪಾತ್ರದಲ್ಲಿ ನಟಿಸಿರುವ ಕಿರಣ್ ರಾಜ್ ಜಬರ್​ದಸ್ತ್ ಆ್ಯಕ್ಷನ್ ಮೂಲಕ ಗಮನ ಸೆಳೆದಿದ್ದಾರೆ. ಗುರುತೇಜ್ ಶೆಟ್ಟಿ ಈ ಚಿತ್ರ ನಿರ್ದೇಶಿಸಿದ್ದು, ರವಿಶಂಕರ್, ಯಶ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಸೀರಿಯಲ್​ ನಟಿ ಸಮೀಕ್ಷಾ ಈ ಚಿತ್ರಕ್ಕೆ ನಾಯಕಿ.

RELATED ARTICLES
- Advertisment -
Google search engine

Most Popular