spot_img
25.6 C
Udupi
Monday, December 4, 2023
spot_img
spot_img
spot_img

ಬೆಂಗಳೂರಲ್ಲಿ 3 ದಿನ ಕಂಬಳ ಆಟ: ಉದ್ಘಾಟನೆಗೆ ಬರಲಿದ್ದಾರೆ ನಟಿ ಅನುಷ್ಕಾ ಶೆಟ್ಟಿ


ಬೆಂಗಳೂರು: ತುಳುನಾಡಿನ ಭಾಗದ ಸಾಂಪ್ರದಾಯಿಕ ಆಟ ಕಂಬಳ ಈ ವರ್ಷ ಮೊಟ್ಟ ಮೊದಲ ಬಾರಿಗೆ ರಾಜ್ಯ ರಾಜಧಾನಿಯಲ್ಲಿ ನಡೆಯಲಿದೆ. ಕಂಬಳ ಎಂಬ ಜನಪ್ರಿಯ ಕ್ರೀಡೆಯನ್ನು ಸಾಮಾನ್ಯವಾಗಿ ಪ್ರತಿ ವರ್ಷ ತುಳುನಾಡಿನ ಕರ್ನಾಟಕದ ಹಳ್ಳಿಗಳಲ್ಲಿ ಚಳಿಗಾಲದ ಸಮಯದಲ್ಲಿ ನಡೆಸಲಾಗುತ್ತದೆ.

ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಕಂಬಳ ಉದ್ಘಾಟನೆಗೆ ಮಂಗಳೂರು ಮೂಲದ ದಕ್ಷಿಣ ಭಾರತದ ಜನಪ್ರಿಯ ನಟಿ ಅನುಷ್ಕಾ ಶೆಟ್ಟಿ, ಅವರನ್ನು ಆಹ್ವಾನಿಸಲಾಗಿದೆ.
ಮೂಲತಃ ಮಂಗಳೂರಿನಾಕೆಯೇ ಆಗಿರುವ ಅನುಷ್ಕ ಶೆಟ್ಟಿ, ಕಂಬಳಾಭಿಮಾನಿ. ಊರಿನ ಅಥವ ಕುಟುಂಬದ ಯಾವುದೇ ಕಾರ್ಯಕ್ರಮಗಳಿಗೂ ಇವರು ತಪ್ಪದೇ ಹಾಜರಿರುತ್ತಾರೆ.ದೈವ- ದೇವರುಗಳ ಕಾರ್ಯಗಳಿಗೆ ಅನುಷ್ಕ ಶೆಟ್ಟಿ, ಮೊದಲ ಪ್ರಾಶಸ್ತ್ರವನ್ನು ನೀಡುತ್ತಾರೆ.

ತುಳು ಕೂಟಕ್ಕೆ 50 ವರ್ಷ ತುಂಬಿರುವ ಹಿನ್ನೆಲೆ ಮೊಟ್ಟ ಮೊದಲು ಬಾರಿಗೆ ರಾಜಾಧಾನಿಯಲ್ಲಿ ಕಂಬಳವನ್ನ ಮಾಡಲು ತುಳುಕೂಟ ನಿರ್ಧರಿಸಿದೆ. ಸಧ್ಯ ಈ‌ ಕಂಬಳವನ್ನ ಪ್ಯಾಲೇಸ್ ಗ್ರೌಂಡ್ನಲ್ಲಿ ಮಾಡಲು ಜಾಗ ಗುರುತಿಸಿದ್ದು, ಈಗಾಗಲೇ ಮೈಸೂರ್ ಒಡೆಯರ್ ಜೊತೆಗೂ ಒಪ್ಪಿಗೆ ಪಡೆದುಕೊಂಡಿದ್ದಾರೆ. ಇನ್ನು ನವೆಂಬರ್ ತಿಂಗಳ 24, 25, 26 ನೇ ತಾರೀಖಿನಂದು ಕಂಬಳ ನಡೆಸಲು ದಿನಾಂಕ ನಿಗದಿ ಮಾಡಿದ್ದು, ಕಂಬಳಕ್ಕೆ 150 ಜೋಡಿಯ ಕೋಣಗಳು ಬರಲಿವೆಯಂತೆ. ಅಂದಾಜು 5 ಲಕ್ಷಕ್ಕು ಹೆಚ್ಚು ಜನರು ಬರುವ ಸಾಧ್ಯತೆ ಇದೆ. ಕಂಬಳಕ್ಕೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಅನುಷ್ಕಾ ಶೆಟ್ಟಿ, ಸೇರಿದಂತೆ ಹಲವರು ಬರುವ ಸಾಧ್ಯತೆ ಇದೆ. ಕಂಬಳಕ್ಕೆ ಬರುವ ಕೋಣಗಳನ್ನ ವಾಹನಗಳಲ್ಲಿ ತರಿಸಲಿದ್ದು, ಸಕಲೇಶಪುರ, ಹಾಸನ, ನೆಲಮಂಗಲ ಮೂರು ಕಡೆ ಕೋಣಗಳಿಗೆ ವಿಶ್ರಾಂತಿಗೆ ಅವಕಾಶ ಕಲ್ಪಿಸಲಾಗುವುದು. ಬೆಂಗಳೂರಿಗೆ ಒಂದು ದಿನದ ಮುಂಚಿತವಾಗಿ ಕೊಣಗಳು ಬರಲಿವೆಯಂತೆ.

Related Articles

Stay Connected

0FansLike
3,912FollowersFollow
0SubscribersSubscribe
- Advertisement -

Latest Articles