ಒಂದು ಕಾಲದಲ್ಲಿ ಸಿನಿಪ್ರಿಯರ ಅಚ್ಚುಮೆಚ್ಚಿನ ನಟಿಯರಲ್ಲಿ ಒಬ್ಬರಾಗಿದ್ದ ಬಹುಭಾಷಾ ನಟಿ ಪ್ರಣೀತಾ ಈಗ ಫ್ಯಾಮಿಲಿ ಜೀವನ ಸಾಗಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಮೊದಲ ಮಗುವಿಗೆ ಎರಡು ವರ್ಷ ತುಂಬುತ್ತಿದ್ದಂತೆ, ಇದೀಗ 2ನೇ ಮಗುವಿಗೆ ಕಾತರಿಸುತ್ತಿದ್ದಾರೆ. ಈ ಕುರಿತ ಫೋಟೊಶೂಟ್ ಮಾಡಿ, ಫೋಟೊಗಳನ್ನು ಹಂಚಿಕೊಂಡರುವ ಪ್ರಣೀತಾ, ತಮ್ಮ ಖುಷಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ನಿತಿನ್ ರಾಜು ಎಂಬ ಉದ್ಯಮಿಯನ್ನು ವಿವಾಹವಾಗಿರುವ ಪ್ರಣೀತಾ, ಎರಡನೇ ಮಗುವಿನ ಬೇಬಿ ಶವರ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಇದು ಸಾಕಷ್ಟು ವೈರಲ್ ಆಗಿದೆ. ಈ ಫೋಟೊವನ್ನು ತನ್ನ ಪತಿಯೇ ತೆಗೆದಿದ್ದು ಎಂದು ಹೇಳಿರುವ ಪ್ರಣೀತಾ, ತಮ್ಮ ಪತಿಯ ಫೋಟೊ ಸ್ಕಿಲ್ ಇಂಪ್ರೂ ಆಗಿದೆಯಾ? ಎಂದು ಪ್ರಶ್ನಿಸಿದ್ದಾರೆ.

ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನೆಮಾಗಳಲ್ಲಿ ನಟಿಸಿ ಸೈ ಎನಿಸಿರುವ ಪ್ರಣೀತಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಹೀಗಾಗಿ ಅವರ ಫೋಟೊಗೆ ಸಾವಿರಾರು ಲೈಕ್ಸ್‌ಗಳು ಬಂದಿವೆ.
ಪ್ರಣೀತಾ ಅವರ ಇನ್ಸ್‌ಟಾ ಪೋಸ್ಟ್ ನೋಡಲು ಲಿಂಕ್ ಕ್ಲಿಕ್ ಮಾಡಿ…