Wednesday, January 15, 2025
Homeಧಾರ್ಮಿಕಮಂಗಳೂರಿಗೆ ಬಂದು ದೈವ ದೇವರ ಮೊರೆ ಹೋದ ನಟಿ ಶಿಲ್ಪಾ ಶೆಟ್ಟಿ

ಮಂಗಳೂರಿಗೆ ಬಂದು ದೈವ ದೇವರ ಮೊರೆ ಹೋದ ನಟಿ ಶಿಲ್ಪಾ ಶೆಟ್ಟಿ

ಮಂಗಳೂರು : ಸತತ ಕುಟುಂಬದ ಮೇಲೆ ಬಂದೆರಗುವ ಸಂಕಷ್ಟದಿಂದ ಕಂಗೆಟ್ಟಿರುವ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಅವರು ಮಂಗಳೂರಿಗೆ ಬಂದು ದೈವ – ದೇವದ ಮೊರೆ ಹೋಗಿದ್ದಾರೆ.

ಜಾರಿ ನಿರ್ದೇಶನಾಲಯ ಆಸ್ತಿ ಜಪ್ತಿ ಮಾಡಿದ ಬೆನ್ನಲ್ಲೇ ನಟಿ ಶಿಲ್ಪಾ ಶೆಟ್ಟಿ ಹುಟ್ಟೂರು ತುಳುನಾಡಿನ ದೈವ ದೇವರಿಗೆ ಮೊರೆ ಹೋಗಿದ್ದಾರೆ.

ಕಾರ್ಣಿಕದ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆ ಸುರತ್ಕಲ್ ತಾಲೂಕಿನ ದೇಲಂತಬೆಟ್ಟು ಶಿಬರೂರು ಕೊಡಮಣಿತ್ತಾಯ ಕ್ಷೇತ್ರದ ಬ್ರಹ್ಮಕುಂಭಾಭಿಷೇಕದಲ್ಲಿ ಭಾಗಿಯಾಗಿ ತಮ್ಮ ಕುಟುಂಬದ ಮುಂದಿರುವ ಕಷ್ಟವನ್ನು ಕರುಗುವಂತೆ ಮಾಡು ಎಂದು ಕೈ ಮುಗಿದು ಬೇಡಿದ್ದಾರೆ.

ತಾಯಿ ಮತ್ತು ಮಕ್ಕಳೊಂದಿಗೆ ಬಂದಿದ್ದ ಶಿಲ್ಪಾ, ಬ್ರಹ್ಮಕುಂಭಾಭಿಷೇಕದಲ್ಲಿ ಭಾಗಿಯಾಗಿ ದೇವರ ಆಶೀರ್ವಾದ ಪಡೆದಿದ್ದಾರೆ. ಈ ಹಿಂದೆಯೂ ಅವರು ಅನೇಕ ಬಾರಿ ದೈವದ ಮೊರೆ ಹೋಗಿ ಕಷ್ಟಗಳನ್ನು ದಾಟಿಕೊಂಡಿದ್ದಾರೆ. ಈ ಬಾರಿಯೂ ಅದೇ ನಂಬಿಕೆಯೊಂದಿಗೆ ದೇವರ ಮುಂದೆ ನಿಂತಿದ್ದಾರೆ. 2022ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದಿ ಅಡಿ ಇಡಿ ಪ್ರಕರಣವನ್ನು ದಾಖಲಿಸಿದ್ದು, ಜಾರಿ ನಿರ್ದೇಶನಾಲಯವು 97.97 ಕೋಟಿ ರೂಪಾಯಿ ಮೊತ್ತದ ಸ್ಥಿರ ಹಾಗೂ ಚರಾಸ್ತಿಯನ್ನು ಜಪ್ತಿ ಮಾಡಿದೆ. ಜಪ್ತಿಯಾದ ಆಸ್ತಿಗಳಲ್ಲಿ ಪುಣೆಯಲ್ಲಿರುವ ಬಂಗ್ಲೆ, ಫ್ಲಾಟ್ ಹಾಗೂ ಇಕ್ವಿಟಿ ಷೇರು ಕೂಡ ಹೊಂದಿವೆ. ಈ ಹಿಂದೆ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ವೇರಿಯಬಲ್ ಟೆಕ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಸಂಸ್ಥೆಯ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಸಂಸ್ಥೆಯ ಮೂಲಕ ಅಮಿತ್ ಭಾರದ್ವಾಜ್, ವಿವೇಕ್, ಅಜಯ್, ಮಹೇಂದರ್ ಹೀಗೆ ಹಲವಾರು ಏಜೆಂಟರ್ ಗಳು ಬಿಟ್ ಕಾಯಿನ್ ರೂಪದಲ್ಲಿ 2017ರಲ್ಲಿ 6,600 ಕೋಟಿ ರೂ. ಹಣ ಸಂಗ್ರಹಿಸಿದ್ದರು. ಇವರ ಜೊತೆ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವ್ಯವಹಾರ ಮಾಡಿದ್ದರು ಎನ್ನುವ ಆರೋಪವಿದೆ.

RELATED ARTICLES
- Advertisment -
Google search engine

Most Popular