ಅಡಕಳ ಕಟ್ಟೆ” ಮಿತ್ರ ವೃಂದ” ಗ್ರಂಥಾಲಯದಲ್ಲಿ ನಡೆದ ಮಹಿಳಾ ದಿನಾಚರಣೆ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮಕ್ಕಳ ದೊಡ್ಡವರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸಭೆಯಲ್ಲಿ ಗೋಪಾಲಕೃಷ್ಣ ಅಧ್ಯಕ್ಷರು ಮಿತ್ರ ವೃಂದದ, ಮಹಿಳಾಮಂಡಳಿಯ ಅಧ್ಯಕ್ಷರಾಗಿ ಪದ್ಮಾ ನಯನ ಅಧ್ಯಾಪಿಕೆ, ಆಶಾನೂಜಿ ಮುಖ್ಯ ಅತಿಥಿಯಾಗಿ ಸಭೆಯಲ್ಲಿ ಭಾಗವಹಿಸಿದರು.
ಗೋಪಾಲಕೃಷ್ಣ ಅವರು ಲೈಬ್ರರಿಯ ಬಗ್ಗೆ ಒಳ್ಳೆಯ ನುಡಿಗಳನ್ನು ಹೇಳಿದರು. ಪದ್ಮಾ ನಯನ ಅವರೂ ಮಹಿಳಾ ದಿನಾಚರಣೆಯ ಬಗ್ಗೆ ನಾಲ್ಕು ಮಾತುಗಳನ್ನಾಡಿದರು. ಮುಖ್ಯ ಅತಿಥಿಯಾಗಿ ಆಶಾನೂಜಿಯವರು ಮಹಿಳೆಯರ ಬಗ್ಗೆ ಮಾತನಾಡಿದರು .ಹೆಣ್ಣು “ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ದೇವತಾಃ” : ಎಲ್ಲಿ ನಾರಿಯನ್ನು ಪೂಜಿಸಲಾಗುವುದೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂದು ಕಲಿಸಿದೆ ನಮ್ಮ ಪರಂಪರೆ. ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ. ಸ್ತ್ರೀಯರನ್ನೆಲ್ಲಿ ಅವಮಾನ ಗೊಳಿಸಲಾಗುತ್ತದೋ ಅಲ್ಲಿ ಮಾಡಿದ ಕಾರ್ಯಗಳೆಲ್ಲವೂ ವ್ಯರ್ಥ ಎಂದು, ಈ ಮಾತು ಭಾರತೀಯ ಪರಂಪರೆಯಲ್ಲಿ ಹೆಣ್ಣೊಬ್ಬಳ ಸ್ಥಾನಮಾನವನ್ನು ಸೂಚಿಸುತ್ತದೆ ಎಂದು ಅವರು ಪುಟ್ಟ ಭಾಷಣ ಮಾಡಿದರು . ಗ್ರಂಥಾಲಯದ ರೂವಾರಿಯಾದ ರುಕ್ಮಿಣಿ ಯವರು ನಿರೂಪಿಸಿ, ಕೊನೆಗೆ ಧನ್ಯವಾದ ಸಮರ್ಪಿಸಿದರು.