Monday, February 10, 2025
HomeUncategorizedಅಡೂರು ಬಾಲಕೃಷ್ಣ ತಂತ್ರಿ ಕವನ ಸ್ಪರ್ಧೆ - ಫಲಿತಾಂಶ ಪ್ರಕಟ

ಅಡೂರು ಬಾಲಕೃಷ್ಣ ತಂತ್ರಿ ಕವನ ಸ್ಪರ್ಧೆ – ಫಲಿತಾಂಶ ಪ್ರಕಟ

ಅಡೂರು : ಆಡೂರಿನ ಶಿವಗಿರಿ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಅಡೂರು ಕೊರತಿಮೂಲೆಯ ಬಾಲಕೃಷ್ಣ ತಂತ್ರಿಗಳ ಸ್ಮರಣಾರ್ಥವಾಗಿ ಸ್ವಾತಂತ್ರ್ಯೋತ್ಸವ-2024ರ ಅಂಗವಾಗಿ ನಡೆಸಿದ ಕಾಸರಗೋಡು ಜಿಲ್ಲೆಯ ಕನ್ನಡ ಪ್ರೌಢಶಾಲಾ ವಿಭಾಗದ ಕನ್ನಡ ಕವನ ರಚನಾ ಸ್ಪರ್ಧೆಯಲ್ಲಿ ಮುಳ್ಳೇರಿಯದ ಜಿ. ವಿ. ಎಚ್. ಎಸ್. ಶಾಲೆಯ 10ನೇ ತರಗತಿಯ ಸಿಂಚನ ಎ ಅವರು ಬರೆದ ‘ದು:ಖದ ಆ ಕ್ಷಣಗಳು’ ಕವನವು ಪ್ರಥಮ ಸ್ಥಾನ ಪಡೆದಿದೆ. ದ್ವಿತೀಯ ಬಹುಮಾನವನ್ನು ಬದಿಯಡ್ಕದ ಶ್ರೀ ಭಾರತಿ ವಿದ್ಯಾಪೀಠದ 8ನೇ ತರಗತಿಯ ಕವನ ಅವರ ‘ಸ್ವಾತಂತ್ರ್ಯೋತ್ಸವ’ ಕವನ ಪಡೆದಿದೆ. ತೃತೀಯ ಬಹುಮಾನವನ್ನು ಕಾರಡ್ಕ ಜಿ. ವಿ. ಎಚ್. ಎಸ್. ಶಾಲೆಯ 10ನೇ ತರಗತಿಯ
ಕೀರ್ತನ ಕೆ ಅವರ ‘ಬಡಜೀವ’ ಗಳಿಸಿದೆ. ಪ್ರೋತ್ಸಾಹಕ ಬಹುಮಾನವು ಬದಿಯಡ್ಕದ ಪೆರಡಾಲ ನವಜೀವನ ಪ್ರೌಢಶಾಲೆಯ 9ನೇ ತರಗತಿಯ ಕೆ ಕವನ ಅವರು ಬರೆದ ‘ಸ್ವಾತಂತ್ರ್ಯದ ಹರುಷ’ ಪಡೆದುಕೊಂಡಿದೆ. ವಿಜೇತರಿಗೆ ಬಹುಮಾನ ವಿತರಣೆಯು 2024 ಸೆ.15ರಂದು ಕಾಸರಗೋಡಿನ ಕನ್ನಡ ಭವನ ಗ್ರಂಥಾಲಯದ ಸಭಾಂಗಣದಲ್ಲಿ ನಡೆಯುವ ಕೇರಳ-ಕರ್ನಾಟಕ ಸ್ಪಂದನ ಸಿರಿ ಕೃಷಿ, ಕನ್ನಡ ಶಿಕ್ಷಣ ಮತ್ತು ಸಂಸ್ಕೃತಿ ಸಮ್ಮೇಳನದಲ್ಲಿ ವಿತರಿಸಲಾಗುವುದು ಎಂದು ಪ್ರಶಾಂತ ರಾಜ ವಿ ತಂತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular