ದಿನಾಂಕ: 01-01-2025ನೇ ಬುಧವಾರದಂದು ಪರಿಸರ ಪ್ರೇಮಿ ಶ್ರೀ ಕೃಷ್ಣಪ್ಪ ಮತ್ತು ಶ್ರೀ ರಾಮಚಂದ್ರ ಭಟ್ ಇವರಿಂದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಗೌರವ ಸಮಾದೇಷ್ಟರಾಗಿ 10 ವರ್ಷಗಳ ಸೇವೆಯನ್ನು ಪೂರೈಸಿರುವ ಡಾ|| ಮುರಲೀ ಮೋಹನ ಚೂಂತಾರು ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಸನ್ಮಾನವನ್ನು ಸ್ವೀಕರಿಸಿದ ಡಾ|| ಮುರಲೀ ಮೋಹನ ಚೂಂತಾರು ರವರು ಮಾತನಾಡಿ ಪರಿಸರ ಪ್ರೇಮಿ ಕೃಷ್ಣಪ್ಪ ಮತ್ತು ರಾಮಚಂದ್ರ ಭಟ್ ರವರು ಗೃಹರಕ್ಷಕ ದಳ ಕಛೇರಿಯಲ್ಲಿ ನಡೆಯುವ ವನಮಹೋತ್ಸವ ಕಾರ್ಯಕ್ರಮದಲ್ಲಿ ಮತ್ತು ಇತರ ಪ್ರದೇಶಗಳಲ್ಲಿ ಗಿಡನೆಡುವ ಕಾರ್ಯಕ್ರಮಗಳಲ್ಲಿ ಸದಾ ಭಾಗಿಯಾಗುತ್ತಿದ್ದರು. ಇನ್ನು ಮುಂದೆಯೂ ನಿಮ್ಮ ಸಹಕಾರವನ್ನು ಈ ಇಲಾಖೆಗೆ ನೀಡುವಂತೆ ಆಶಿಸುತ್ತೇನೆ. ಗೃಹರಕ್ಷಕ ದಳದಲ್ಲಿ ಕೆಲಸ ಮತ್ತು ನಿಷ್ಕಾಮ ಸೇವೆಯಿಂದ ಮಾನಸಿಕ ನೆಮ್ಮದಿ ಮತ್ತು ಸಂತೃಪ್ತಿ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.
ಸನ್ಮಾನ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿ ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಶ್ಯಾಮಲಾ ಎ., ಹಾಗೂ ಮೂಡಬಿದ್ರಿ ಘಟಕದ ಪ್ರಭಾರ ಘಟಕಾಧಿಕಾರಿ ಚಂದ್ರಶೇಖರ್, ಮಂಗಳೂರು ಘಟಕದ ಸಾರ್ಜಂಟ್ ಶ್ರೀ ಸುನಿಲ್ ಕುಮಾರ್, ಧನಂಜಯ, ಸಂಜಯ್ ಶೆಣೈ, ನಿರುಪಮಾ, ದಿವ್ಯ, ಸುಲೋಚನಾ, ಖತೀಜಮ್ಮ ಮುಂತಾದವರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಗೃಹರಕ್ಷಕ ದಳದ ಸಮಾದೇಷ್ಟರಾದ
ಡಾ|| ಮುರಲೀ ಮೋಹನ್ ಚೂಂತಾರು ರವರಿಗೆ ಸನ್ಮಾನ
RELATED ARTICLES