26.6 C
Udupi
Tuesday, November 29, 2022
spot_img

ಅದ್ಯಪಾಡಿ ಬೀಬಿಲಚ್ಚಿಲ್ ಶ್ರೀ ದುರ್ಗಾಪರಮೇಶ್ವರಿ ದೇವಳ ಬ್ರಹ್ಮಕಲಶೋತ್ಸವ ನಾಗಮಂಡಲೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬಜಪೆ:ಧಾರ್ಮಿಕ ಕೇಂದ್ರಗಳ ಜೀರ್ಣೋದ್ದಾರ ಕಾರ್ಯಗಳ ಲ್ಲಿ ಸರ್ವರೂ ಸಕ್ರೀಯವಾಗಿ ಪಾಲ್ಗೊಳ್ಳಬೇಕು. ಜೀರ್ಣೋದ್ದಾರದ ಕಾರ್ಯಗಳು ಯಶಸ್ವಿಯಾಗಲು ಸರ್ವರ ಸಹಕಾರ ಅಗತ್ಯ ಎಂದು ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನ ಅದ್ಯಪಾಡಿ ಇಲ್ಲಿನ ಆಡಳಿತ ಮೊಕ್ತೇಸರ ಶೆಡ್ಡೆ ಮಂಜುನಾಥ ಭಂಡಾರಿ ಅವರು ಹೇಳಿದರು.

ಅವರು ಭಾನುವಾರದಂದು ಬೀಬಿಲಚ್ಚಲ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 2023 ರ ಫೆ.2 ರಿಂದ 6ರವರೆಗೆ ನಡೆಯಲಿರುವ ಅಷ್ಟ ಬಂದ ಬ್ರಹ್ಮಕಲಶೋತ್ಸವ ಹಾಗೂ ಅಷ್ಟ ಪವಿತ್ರ ನಾಗಬ್ರಹ್ಮ ಮಂಡಲೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಅವರು ಆಶೀರ್ವಚನ ನೀಡಿದರು.

ಬೀಬಿಲಚ್ಚಿಲ್ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಭಟ್ ಧಾರ್ಮಿಕ ವಿಧಿಗಳನ್ನು ನೆರವೇರಿಸಿ ದೀಪ ಪ್ರಜ್ವಲನೆಗೊಳಿಸಿ ಶುಭ ಹಾರೈಸಿದರು.ವಾಸುದೇವ ಭಟ್ ಅವರು ನಿಧಿ ಸಂಚಯನಕ್ಕೆ ಚಾಲನೆ ನೀಡಿ ದರು.

ಬೀಬಿಲಚ್ಚಿಲ್ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೋಕ್ತೇಸರ ಮೋನಪ್ಪ ಮೇಸ್ತ್ರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ದೇವಸ್ಥಾನದಲ್ಲಿ ಈಗಾಗಲೇ ಜೀರ್ಣೋದ್ದಾರದ ಕಾರ್ಯಗಳು ಭರದಿಂದ ಸಾಗುತ್ತಿದ್ದು,ಕಾಮಗಾರಿಗಳು ಪ್ರಗತಿಯಲ್ಲಿದೆ.ಆರ್ಥಿಕವಾಗಿ ಸಹಕಾರದ ಅಗತ್ಯತೆ ಇದೆ.ಸರಕಾರದ ಅನುದಾನದ ನೀರಿಕ್ಷೆಯಲ್ಲಿದ್ದು,ದಾನಿಗಳ ಸಹಕಾರವು ಮುಖ್ಯ ಎಂದರು.

ಈ ಸಂದರ್ಭ ಶ್ರೀ ಆದಿನಾಥೇಶ್ವರ ದೇವಸ್ಥಾನ ಆದ್ಯಪಾಡಿ ಇಲ್ಲಿನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ್ ಶೆಟ್ಟಿ ,ಆದಿನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಂದರ ಬಂಗೇರ, ರಾಜೀವ ಆಳ್ವ ಅದ್ಯಪಾಡಿಗುತ್ತು, ನಿವೃತ್ತ ಪೊಲೀಸ್ ಇನ್ಸ್ಪೆಕ್ಟರ್ ರಾಘವ ಪಡೀಲ್, ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕ ಡಾ. ರವೀಂದ್ರ ಕೌಡೂರು ,ಬಜರಂಗದಳ ವಿಭಾಗ ಸಂಚಾಲಕ ಭುಜಂಗ ಕುಲಾಲ್, ಶ್ರೀರಾಮ ಸೇನೆಯ
ಪ್ರಧಾನ ಕಾರ್ಯದರ್ಶಿ ಮಂಜುನಾಥ ಕುಂದರ್ ,ಪ್ರಮುಖರಾದ ಶೇಖರ ಸಫಲಿಗ ಪಡುಪೆರಾರ, ಶಿವಪ್ಪ ಬಂಗೇರ , ನಾಗೇಶ್ ಕುಲಾಲ್ ,ಕೇಶವ ಪೊಳಲಿ ಬೈಲುಮಾಗಣೆಯ ಪ್ರಮುಖರು ಪಾಲ್ಗೊಂಡಿದ್ದರು.

ವಿನಯ್ ಕುಮಾರ್ ಅದ್ಯಪಾಡಿ ಕಾರ್ಯಕ್ರಮ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,585FollowersFollow
0SubscribersSubscribe
- Advertisement -spot_img

Latest Articles