ಚೆನ್ನೈ: ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ಚಿತ್ರರಂಗದಲ್ಲಿ ಮಿಂಚುತ್ತಿರುವಾಗಲೇ ರಾಜಕೀಯ ಕ್ಷೇತ್ರಕ್ಕೆ ಎಂಟ್ಟಿ ನೀಡುವ ಸುಳಿವು ನೀಡಿದ್ದಾರೆ. ಈ ನಡುವೆ ಮತ್ತೊಬ್ಬ ಜನಪ್ರಿಯ ನಟ ಸೂರ್ಯ ಕೂಡ ರಾಜಕೀಯ ರಂಗ ಪ್ರವೇಶಿಸಲಿದ್ದಾರೆ.
ಗೋಟ್ ಸಿನಿಮಾದ ಬಳಿಕ ಮತ್ತೊಂದು ಚಿತ್ರ ಪೂರ್ಣಗೊಳಿಸಲಿರುವ ವಿಜಯ್, ಆ ಬಳಿಕ ಪೂರ್ಣ ಪ್ರಮಾಣದಲ್ಲಿ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಹೇಳಿದ್ದಾರೆ.
ವಿಜಯ್ ಮೊದಲಿನಿಂದಲೂ ಸಮಾಜಮುಖಿ ಕೆಲಸದಲ್ಲಿ ನಿರತರಾಗಿದ್ದರು. ಇದೀಗ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿರುವ ಅವರು ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಈಗ ಸಿಂಗಂ ಖ್ಯಾತಿಯ ನಟ ಸೂರ್ಯ ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಗರಂ ಫೌಂಡೇಶನ್ ಮೂಲಕ ಜನಸೇವೆ ಮಾಡಿಕೊಂಡು ಬಂದಿದ್ದ ಸೂರ್ಯ ಈಗ ರಾಜಕೀಯ ಪ್ರವೇಶ ಮಾಡಲಿದ್ದಾರೆ.
ತಮ್ಮ ಫೌಂಡೇಶನ್ ಅನ್ನು ತಮಿಳುನಾಡಿನಾದ್ಯಂತ ವಿಸ್ತರಿಸಲಿದ್ದಾರೆ. ಇದಕ್ಕಾಗಿ 60 ಜಿಲ್ಲೆಗಳಲ್ಲಿ ವಾರ್ಡ್ ವಾರು ಆಡಳಿತಗಾರರನ್ನು ನೇಮಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಹಲವು ಸುತ್ತಿನ ಮಾತುಕತೆ ನಡೆದಿದೆ. ಆದಾಗ್ಯೂ ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಸೂರ್ಯ ರಾಜಕೀಯ ಪ್ರವೇಶಿಸುವುದು ಪ್ರಕಟಗೊಳ್ಳಲಿದೆ.