ಮಲ್ಪೆ : ಕೊಡವೂರು ಕೆರೆಕಟ್ಟೆ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ನೂತನ ಶಿಲಾಮಯ ದೇವಾಲಯದ ಸಮರ್ಪಣೆ, ಪುನಃ ಪ್ರತಿಷ್ಟೆ ಬ್ರಹ್ಮಕುಂಭಾಭಿಷೇಕ ಮಹೋತ್ಸವವು ಎ. 13ರಿಂದ 17ರ ವರೆಗೆ ವೇ।ಮೂ। ಪುತ್ತೂರು ಹಯವದನ ತಂತ್ರಿಗಳ ನೇತೃತ್ವದಲ್ಲಿ ಜರಗಲಿದೆ. ಆ ಪ್ರಯುಕ್ತ ಎ. 14 ರಂದು ಬೆಳಗ್ಗೆ ಗಣಯಾಗ, ನವಗ್ರಹಯಾಗ ಬಿಂಬ ಶುದ್ಧಿ ಪ್ರಕ್ರಿಯೆ ಸಂಜೆ ಶ್ರೀ ಸಿದ್ಧಿ ವಿನಾಯಕ ದೇವರ ಬಿಂಬಾಧಿವಾಸ, ಶಿರಸ್ತತ್ವ ಹೋಮ, ಶ್ರೀ ನಾಗದೇವರ ಅಧಿವಾಸ, ರತ್ನನ್ಯಾಸ, ಗರ್ಭಗೃಹಾಧಿವಾಸ ಮೊದಲಾದ ಧಾರ್ಮಿಕ ಪ್ರಕ್ರಿಯೆಗಳು ನಡೆಯಲಿರುವುದು. ಜ. 15ರ ಬೆಳಗ್ಗೆ ವೃಷಭ ಲಗ್ನ ಸುಮುಹೂರ್ತದಲ್ಲಿ ಬಿಂಬ ಪ್ರತಿಷ್ಠಾವಿಧಿ, ಕಲಶಾಭಿಷೇಕ, ಆಶ್ಲೇಷ ಬಲಿಯಾಗಿ ಪ್ರಸಾದ ಎರತಣೆ ನಡೆಯಲಿದೆ. ಎ. 16ರಂದು ಬೆಳಗ್ಗೆ ಪುಣ್ಯಾಹವಾಚನ, ಬಿಂಬಶುದ್ದಿ ಪ್ರಕ್ರಿಯೆ, ಸಂಜೆ ಶ್ರೀ ಸಿದ್ಧಿ ತತ್ವ ಹೋಮ, ಗಣಯಾಗ, ಕಲಶಾಭಿಷೇಕ, ಬ್ರಹ್ಮಕುಂಭಾಭಿಷೇಕ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ಜರಗಲಿದೆ. ಇದೇ ಸಂದರ್ಭದಲ್ಲಿ ಗಾನಸುರಭಿ ಮತ್ತು ತಂಡದವರಿಂದ ಭಕ್ತಿಗಾನಾಮೃತಂ ಜರಗಲಿದೆ. ಸಂಜೆ ದೀಪಾರಾಧನೆ, ರಂಗಪೂಜೆ, ರಾತ್ರಿಪೂಜೆ ನಡೆಯಲಿರುವುದು ಎಂದು ಕೆರೆಕಟ್ಟೆ ಗಣಪತಿ ಗುಡಿ ಜೀರ್ಣೋದ್ದಾರ ಸಮಿತಿ, ಕೊಡವೂರು ಶಂಕರನಾರಾಯಣ ವ್ಯವಸ್ಥಾಪನ ಸಮಿತಿಯ ಪ್ರಕಟನೆ ತಿಳಿಸಿದೆ.