ಅಘೋರಿ ಚಿದಂಬರ ಯೋಗಿಯವರಿಗೆ “ಸರಸ್ವತಿ ಕನ್ನಡ ರತ್ನ”ರಾಜ್ಯ ಪ್ರಶಸ್ತಿ

0
57

ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಮತ್ತು ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಕೊಡ ಮಾಡುವ “ಸರಸ್ವತಿ ಕನ್ನಡ ರತ್ನ” ರಾಜ್ಯ ಪ್ರಶಸ್ತಿಯನ್ನು ದಾವಣಗೆರೆ ಆಧ್ಯಾತ್ಮ ಪರಂಪರೆಯ ಸಾಧನೆಯನ್ನು ಗುರುತಿಸಿ ಅಘೋರಿ ಚಿದಂಬರ ಯೋಗಿಯವರಿಗೆ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಈ ಎರಡೂ ಸಂಸ್ಥೆಗಳ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್‌ಶೆಣೈ ತಿಳಿಸಿದ್ದಾರೆ.

ಹಿಮಾಲಯದ ಯೋಗಿ ಆಧ್ಯಾತ್ಮಿಕ ಗುರು ಹಾಗೂ ಕೋಸ್ಮಿಕ ಹೀಲರ್ ಮಹಾವತಾರ ಬಾಬಾಜಿಯವರ ಮಾರ್ಗದರ್ಶನದಲ್ಲಿ ದಾವಣಗೆರೆಯಲ್ಲಿ “ಚಂಡಿಕಾಶ್ರಮ” ಸ್ಥಾಪಿಸಿ ಅಲೋಪಥಿ ಚಿಕಿತ್ಸೆಯೊಂದಿಗೆ ಅನಾರೋಗ್ಯದಿಂದ ಬಳಲುತ್ತಿರುವ , ಸಾರ್ವಜನಿಕರಿಗೆ ಆರೋಗ್ಯ ಭಾಗ್ಯ ವಿತರಿಸುವ ಇವರು ಕೋಸ್ಮಿಕ, ಹೀಲಿಂಗ್ ಮತ್ತು ಧ್ಯಾನ ಪದ್ಧತಿ ಮೂಲಕ ಸಮಾಜ ಸೇವೆ ಗುರುತಿಸಿ ಈ ರಾಜ್ಯ ಪ್ರಶಸ್ತಿ ವಿತರಣೆ ಮಾಡಲಾಗಿದೆ ಎಂದು ಕಲಾಕುಂಚ ಸರ್ವ ಸದಸ್ಯರು, ಪದಾಧಿಕಾರಿಗಳು ಇವರಿಗೆ ಆರೋಗ್ಯ ಭಾಗ್ಯ ಕರುಣಿಸಿದ ಸಾರ್ವಜನಿಕರು ಅಭಿಮಾನದಿಂದ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here