ದಾವಣಗೆರೆ-:ದಾವಣಗೆರೆಯ ಓಂ ಚಂಡಿಕಾ ಸೇವಾ ಟ್ರಸ್ಟ್ ಆಧ್ಯಾತ್ಮ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚೈತನ್ಯ ಚಿಕಿತ್ಸಕರೂ ಆಧ್ಯಾತ್ಮ ಮಾರ್ಗದರ್ಶಕರೂ ನಮ್ಮ ಸಂಸ್ಕೃತಿ, ಸಂಸ್ಕಾರ ಸಂಪ್ರದಾಯಕ ಜ್ಞಾನ ಮಿತಿಯ ಮಿತಿಗಳನ್ನು ಸಾರ್ವಜನಿಕರಲ್ಲಿ ಮೀರಿಸುವ ಬಾಹ್ಯ ಲೋಕದ ಆಧ್ಯಾತ್ಮಿಕ ರಹಸ್ಯಗಳನ್ನು ಅನ್ವೇಶಿಸುವ ಸಾಧಕರಾದ ಅಘೋರಿ ಚಿದಂಬರ ಯೋಗಿಯವರನ್ನು ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಇತ್ತೀಚಿಗೆ ನಡೆದ ಕರ್ನಾಟಕದ ೬೯ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಗರದ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಅದ್ದೂರಿಯಾಗಿ ದಿವ್ಯ ಭವ್ಯ ವೇದಿಕೆಯಲ್ಲಿ ಕನ್ನಡ ಪೇಟದೊಂದಿಗೆ “ಕರ್ನಾಟಕ ಮುಕುಟ ಮಣಿ” ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಕಲಾಕುಂಚ ಸೇರಿದಂತೆ ವಿವಿಧ ಸಂಘಟನೆಗಳ ಸರ್ವ ಸದಸ್ಯರು, ಪದಾಧಿಕಾರಿಗಳು ಅವರಲ್ಲಿ ಆಧ್ಯಾತ್ಮ ಪರಂಪರೆಯ ತರಬೇತಿ ಪಡೆದ ಶಿಷ್ಯರುಗಳು ಅಭಿಮಾನದಿಂದ ಅಭಿನಂದಿಸಿದ್ದಾರೆ.