Sunday, July 14, 2024
Homeಕಾರ್ಕಳಮಿಯ್ಯಾರು ಚರ್ಚ್ ಸಭಾಂಗಣದಲ್ಲಿ ನಡೆದ ಕೃಷಿ ಮಾಹಿತಿ ಹಾಗೂ ಡ್ರೋನ್ ಬಳಕೆ ಪ್ರಾತ್ಯಕ್ಷತೆ

ಮಿಯ್ಯಾರು ಚರ್ಚ್ ಸಭಾಂಗಣದಲ್ಲಿ ನಡೆದ ಕೃಷಿ ಮಾಹಿತಿ ಹಾಗೂ ಡ್ರೋನ್ ಬಳಕೆ ಪ್ರಾತ್ಯಕ್ಷತೆ

ಕಾರ್ಕಳ : ಕರ್ನಾಟಕ ಆಗ್ರೋ ಕೆಮಿಕಲ್ಸ್ (ಮಲ್ಟಿಪ್ಲೆಕ್ಸ್) ಸಿರಿಮುಡಿ ಆಗ್ರೋ ಇವರ ಆಶ್ರಯದಲ್ಲಿ ಕೃಷಿ ಮಾಹಿತಿ ಹಾಗೂ ಡ್ರೋನ್ ಬಳಕೆ ಪ್ರಾತ್ಯಕ್ಷತೆ ಮಿಯ್ಯಾರು ಚರ್ಚ್ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕರ್ನಾಟಕ ಮಾರುಕಟ್ಟೆಯ ಮುಖ್ಯಸ್ಥರಾದ ಡಾ.ಎಂ ನಾರಾಯಣ ಸ್ವಾಮಿ ರೋಗ ಮತ್ತು ಕೀಟಗಳ ನಿರ್ವಹಣೆಯ ಮಾಹಿತಿ ನೀಡಿದರು, ಹಾಗೂ ಡ್ರೋನ್ ಮೂಲಕ ಮದ್ದು ಸಿಂಪಡನೆಯ ಪ್ರಾತ್ಯಕ್ಷತೆ ನಡೆಯಿತು.

ಈ ಸಂದರ್ಭದಲ್ಲಿ ಸಂತ ಡೊಮಿನಿಕರ ದೇವಾಲಯ ಮಿಯ್ಯಾರಿನ ಧರ್ಮ ಗುರುಗಳಾದ ಕ್ಯಾನ್ಯೂಟ್ ಬರ್ಬೋಜಾ,ಮುಖ್ಯ ಅತಿಥಿಗಳಾದ ಮಹಾವೀರ ಹೆಗ್ಡೆ, ಭಾಸ್ಕರ್ ಎಸ್ ಕೋಟ್ಯಾನ್, ಕಾರ್ಕಳ ತೋಟಗಾರಿಕ ರೈತ ಉತ್ಪಾದನ ಕಂಪನಿಯ ಅಧ್ಯಕ್ಷ ಅಂತೋನಿ ಡಿಸೋಜಾ, ಡೇನಿಯಲ್ ರೇಂಜರ್, ಸಿರಿಮುಡಿ ಆಗ್ರೋದ ಮುಖ್ಯಸ್ಥರಾದ ಸುನಿಲ್ ತಾವ್ರೋ ಹಾಗೂ ಸುದೇಶ್ ಶೆಟ್ಟಿ ಉಪಸ್ಥಿತರಿದ್ದರು.ಲೋಕೆಶ್ ಕಾರ್ಯಕ್ರಮ ನಿರೂಪಿಸಿದರು.

RELATED ARTICLES
- Advertisment -
Google search engine

Most Popular