Tuesday, April 22, 2025
Homeಉದ್ಯೋಗಕೃಷಿ ಅಧಿಕಾರಿ ಚಿದಾನಂದ ಹೂಗಾರ್ 35 ವರ್ಷಗಳ ಸುದೀರ್ಘ ಸೇವೆ ಬಳಿಕ ಮೇ 31ರಂದು ನಿವೃತ್ತಿ

ಕೃಷಿ ಅಧಿಕಾರಿ ಚಿದಾನಂದ ಹೂಗಾರ್ 35 ವರ್ಷಗಳ ಸುದೀರ್ಘ ಸೇವೆ ಬಳಿಕ ಮೇ 31ರಂದು ನಿವೃತ್ತಿ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕೃಷಿ ಇಲಾಖೆಯ ಕೃಷಿ ಅಧಿಕಾರಿ ಚಿದಾನಂದ ಹೂಗಾರ್ ಸುದೀರ್ಘ 35 ವರ್ಷಗಳ ಕಾಲ ಸೇವೆ ಸಲ್ಲಿಸಿ ಮೇ 31ರಂದು ಸೇವಾ ನಿವೃತ್ತಿಗೊಳ್ಳಲಿದ್ದಾರೆ.

ಇವರು 1989ರಲ್ಲಿ ಪುತ್ತೂರು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಕೃಷಿ ಸಹಾಯಕರಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು. 1998ರಲ್ಲಿ ಬೆಳ್ತಂಗಡಿಗೆ ವರ್ಗವಣೆಗೊಂಡರು. ಬೆಳ್ತಂಗಡಿ ಕೃಷಿ ಇಲಾಖೆಯಲ್ಲಿ ಸುದೀರ್ಘ 26 ವರ್ಷ ಸೇವೆ ಸಲ್ಲಿಸಿದ್ದ ಚಿದಾನಂದ ಹೂಗಾರ್ ಸಹಾಯಕ ಕೃಷಿ ಅಧಿಕಾರಿ, ಕೃಷಿ ಅಧಿಕಾರಿ, ಪ್ರಭಾರ ತಾಂತ್ರಿಕ ಅಧಿಕಾರಿ, ಕೊಕ್ಕಡ-ವೇಣೂರು ರೈತ ಸಂಪರ್ಕ ಕೇಂದ್ರ ಹಾಗೂ ಬೀಜೋತ್ಪನ್ನ ಕೇಂದ್ರದಲ್ಲಿ ಸೇವೆಗೈದಿದ್ದಾರೆ.

ಪ್ರಸುತ್ತ ಬೆಳ್ತಂಗಡಿ ಸರಕಾರಿ ನೌಕರರ ಸಂಘದಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಮೂಲತಃ ವಿಜಯಪುರದವರು. ಪತ್ನಿ ಪಾರ್ವತಿ, ಮಕ್ಕಳಾದ ವಿದ್ಯಾಶ್ರೀ, ವೀಣಾ ಹಾಗೂ ವಿನಯ್ ಕುಮಾರ್ ಜೊತೆ ಧರ್ಮಸ್ಥಳದಲ್ಲಿ ವಾಸ್ಯವಿದ್ದಾರೆ.

RELATED ARTICLES
- Advertisment -
Google search engine

Most Popular