ಬಪ್ಪನಾಡು ಇನ್ಸ್ ಫೈರ್ ವತಿಯಿಂದ, ಲಯನ್ಸ್ ಕ್ಲಬ್ ಕಿನ್ನಿಗೊಳಿಗೆ ಲಯನ್ಸ್ ಜಿಲ್ಲಾ ರಾಜ್ಯಪಾಲ ಅಧಿಕೃತರ ಭೇಟಿಯ ಸಂದರ್ಭದಲ್ಲಿ, ಹ್ಯುಮನಿಟೇರಿಯನ್ ಸಂಸ್ಥೆಗೆ ಸಹಾಯಧನ ವಿತರಣೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯಪಾಲರಾದ ಲಯನ್ ಡಾ. ಮೆಲ್ವಿನ್ ಡಿಸೋಜಾ, ಲಯನ್ಸ್ ಕ್ಲಬ್ ಕಿನ್ನಿಗೋಳಿ ಅಧ್ಯಕ್ಷರಾದ ಹಿಲ್ಡಾ ಡಿಸೋಜ, ಓಸ್ವಲ್ಡ್ ಡಿಸೋಜ, ಸುಧಾಕರ್ ಶೆಟ್ಟಿ, ಬಪ್ಪನಾಡು ಅಧ್ಯಕ್ಷರಾದ ಸುಧೀರ್ ಬಾಳಿಗ, ಕಾರ್ಯದರ್ಶಿ ಪುಷ್ಪರಾಜ್ ಚೌಟ, ಶಿವಪ್ರಸಾದ್, ಪ್ರಾಂತ್ಯ ಅಧ್ಯಕ್ಷರಾದ ಉಷಾ ಮನೋಜ್, ವಲಯ ಅಧ್ಯಕ್ಷರುಗಳಾದ ಪ್ರತಿಭಾ ಹೆಬ್ಬಾರ್, ನೆಲ್ಸನ್ ಲೋಬೋ, ಸ್ಥಾಪಕ ಅಧ್ಯಕ್ಷರಾದ ವೆಂಕಟೇಶ್ ಹೆಬ್ಬಾರ್, ಭಾಸ್ಕರ್ ಕಾಂಚನ್, ಪ್ರಶಾಂತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.