Tuesday, January 14, 2025
Homeಅಪಘಾತಹಟ್ಟಿ ಚಿನ್ನದ ಗಣಿಯಲ್ಲಿ ಏರ್ ಬ್ಲಾಸ್ಟ್, 6 ಜನ ಕಾರ್ಮಿಕರಿಗೆ ಗಾಯ

ಹಟ್ಟಿ ಚಿನ್ನದ ಗಣಿಯಲ್ಲಿ ಏರ್ ಬ್ಲಾಸ್ಟ್, 6 ಜನ ಕಾರ್ಮಿಕರಿಗೆ ಗಾಯ

ರಾಯಚೂರು: ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ಏರ್ ಬ್ಲಾಸ್ಟ್​ ಆಗಿ, ಆರು ಜನ ಕಾರ್ಮಿಕರು ಗಾಯಗೊಂಡಿದ್ದಾರೆ. ಓರ್ವನ ಸ್ಥಿತಿ ಗಂಭೀರವಾಗಿದೆ. ಹುಲಗಣ್ಣ, ಮಲ್ಲರಾವ್, ಪ್ರಭಾಕರ್, ಮೈಕಲ್, ಮರಿಸ್ವಾಮಿಗೆ ಗಾಯಗಳಾಗಿದ್ದು, ಹಟ್ಟಿ ಚಿನ್ನದ ಗಣಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಕಾರ್ಮಿಕ ಬಸವರಾಜ್​ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುರುವಾರ (ಏ.18) ರಂದು ಬೆಳಿಗ್ಗೆ ಕಾರ್ಮಿಕರು ಕೆಲಸಕ್ಕೆ ಹಾಜರಾಗಿದ್ದರು. ಸುರುಂಗದೊಳೆಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಪೂರೈಸಲಾಗುತ್ತಿದ್ದ ಆಮ್ಲಜನಕದ ಗ್ಯಾಸ್ ಮಧ್ಯಾಹ್ನದ ಹೊತ್ತಿಗೆ ​ಬ್ಲಾಕ್​ ಆಗಿ, ಸ್ಫೋಟಗೊಂಡಿದೆ. ಇದರಿಂದ ಏಕಾಏಕಿ ಒಂದು ಬದಿಯ ಮಣ್ಣು ಕುಸಿದಿದೆ. ಈ ವೇಳೆ ಉಸಿರಾಟದ ಸಮಸ್ಯೆಯಿಂದ ನಿತ್ರಾಣಗೊಂಡು ಕಾರ್ಮಿಕರು ಸುರಂಗದಲ್ಲೇ ಕುಸಿದಿದ್ದಾರೆ. ಕೂಡಲೆ ಆರು ಜನ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಆರು ಜನ ಕಾರ್ಮಿಕರ ಪೈಕಿ ಐವರನ್ನು ಹಟ್ಟಿ ಚಿನ್ನದ ಗಣಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಕಾರ್ಮಿಕನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ನಡೆದಿದೆ.

RELATED ARTICLES
- Advertisment -
Google search engine

Most Popular