Sunday, July 21, 2024
Homeರಾಜ್ಯಅಜೆಕಾರು ಗುಡ್ಡೆಅಂಗಡಿ ಶಾಲಾ ಪ್ರಾರಂಭೋತ್ಸವದಲ್ಲಿ ತುಳುನಾಡ ತುಡರ್ ಖ್ಯಾತಿಯ ಕೀರ್ತಿ ಕಾರ್ಕಳ ಭಾಗಿ

ಅಜೆಕಾರು ಗುಡ್ಡೆಅಂಗಡಿ ಶಾಲಾ ಪ್ರಾರಂಭೋತ್ಸವದಲ್ಲಿ ತುಳುನಾಡ ತುಡರ್ ಖ್ಯಾತಿಯ ಕೀರ್ತಿ ಕಾರ್ಕಳ ಭಾಗಿ

ಅಜೆಕಾರು: ಗುಡ್ಡೆಅಂಗಡಿ ಸರಕಾರಿ ಶಾಲೆಯಲ್ಲಿ ನಡೆದ ಶಾಲಾ ಪ್ರಾರಂಭೋತ್ಸವಕ್ಕೆ ಮೇ 31ರಂದು ಆಗಮಿಸಿದ ಕಲಾವಿದ ಹಾಗೂ ತುಳುನಾಡು ಟ್ರಸ್ಟಿನ ರಾಜ್ಯ ಸಂಚಾಲಕರಾದಂತಹ ತುಳುನಾಡ ತುಡರ್ ಖ್ಯಾತಿಯ ಕೀರ್ತಿ ಕಾರ್ಕಳ ಇವರು ಆಗಮಿಸಿ ಸರಕಾರಿ ಶಾಲೆಯ ಸವಲತ್ತುಗಳ ಬಗ್ಗೆ ವಿಚಾರಿಸಿ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ ಹಾಗೂ ಸರಕಾರಿ ಸವಲತ್ತುಗಳನ್ನು ಸದುಪಯೋಗಿಸಿ ಎಂದು ಪೋಷಕರಿಗೆ ವಿನಂತಿಸಿ, ಶಾಲಾ ಮಕ್ಕಳ ಮುಂದಿನ ಜೀವನಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಎಸ್. ಡಿ. ಎಂ. ಸಿ. ಅಧ್ಯಕ್ಷರಾದಂತಹ ಬಸವರಾಜ್, ಶಾಲಾ ಮುಖ್ಯೋಪಾಧ್ಯಾಯನಿ ಜಯಂತಿ ಎಸ್. ಡಿ. ಎಂ. ಸಿ. ಸದಸ್ಯರಾದಂತಹ ಅನುಷಾ ಶೆಟ್ಟಿ ಹಾಗೂ ಸುದಿನ ನ್ಯೂಸ್ ನ ಅರುಣ್ ಕುಮಾರ್ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಶ್ರೀವಸ್ತ ಸ್ವಾಗತಿಸಿ. ಗೌರವ ಶಿಕ್ಷಕಿ ರಕ್ಷಿತಾ ವಂದಿಸಿದರು.

RELATED ARTICLES
- Advertisment -
Google search engine

Most Popular