Wednesday, February 19, 2025
Homeಕಾರ್ಕಳಫೆ.01:ಅಜೆಕಾರು ಶ್ರೀ ಮಹಾವಿಷ್ಣು ಮೂರ್ತಿ ಭಜನಾ ಮಂಡಳಿಯ 40ನೇ ವರ್ಷದ ಭಜನಾ ಮಂಗಲೋತ್ಸವ: ಆಮಂತ್ರಣ ಪತ್ರಿಕೆ...

ಫೆ.01:ಅಜೆಕಾರು ಶ್ರೀ ಮಹಾವಿಷ್ಣು ಮೂರ್ತಿ ಭಜನಾ ಮಂಡಳಿಯ 40ನೇ ವರ್ಷದ ಭಜನಾ ಮಂಗಲೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

ಕಾರ್ಕಳ: ಅಜೆಕಾರು ಶ್ರೀ ಮಹಾವಿಷ್ಣುಮೂರ್ತಿ ಭಜನಾ ಮಂಡಳಿಯ 40ನೇ ವರ್ಷದ ಭಜನಾ ಮಂಗಲೋತ್ಸವವು ಫೆಬ್ರವರಿ 1 ರಂದು ನಡೆಯಲಿದೆ.ಭಜನಾ ಮಂಗಲೋತ್ಸವದ ಆಮಂತ್ರಣ ಪತ್ರಿಕೆಯನ್ನು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿದ್ದ ಭಾಸ್ಕರ ಶೆಟ್ಟಿ ಕುಂಠಿನಿ,ಪ್ರಶಾಂತ ಶೆಟ್ಟಿ, ವಿಜಯ ಶೆಟ್ಟಿ,ಪ್ರಧಾನ ಅರ್ಚಕ ಕೃಷ್ಣಮೂರ್ತಿ ಭಟ್, ಭಜನಾ ಮಂಡಳಿಯ ಅಧ್ಯಕ್ಷರಾದ ಭೋಜ ಮಡಿವಾಳ, ಸದಸ್ಯರಾದ ಡಾ.ಜನಾರ್ದನ ನಾಯಕ್,ಅಶೋಕ್ ಶೆಟ್ಟಿ, ಸುರೇಶ್ ಶೆಟ್ಟಿ,ಸತೀಶ್ ಪೂಜಾರಿ, ಹರೀಶ್ ನಾಯಕ್, ನಂದಕುಮಾರ್ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.
ಭಜನಾ ಮಂಗಲೋತ್ಸವ ಅಂಗವಾಗಿ ಫೆ. 01 ರಂದು ಶನಿವಾರ ಬೆಳಗ್ಗೆ 7 ರಿಂದ ಮರುದಿನ ಭಾನುವಾರ ಸೂರ್ಯೋದಯದವರೆಗೆ ಏಕಾಹ ಭಜನಾ ಕಾರ್ಯಕ್ರಮ ನಡೆಯಲಿದ್ದು,ಸುಮಾರು 24 ಭಜನಾ ತಂಡಗಳು ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ.
ಈ ಪ್ರಯುಕ್ತ ಜ.26 ರಿಂದ ಜ.,31 ರವರೆಗೆ ರಾತ್ರಿ 7 ರಿಂದ 8ರವರೆಗೆ ನಿತ್ಯ ಭಜನೆ ಹಾಗೂ ಮಹಾಪೂಜೆ ನಡೆಯಲಿದೆ.
ಫೆ1 ರಂದು ಶನಿವಾರ ಸಂಜೆ 4.30ರಿಂದ ಅಜೆಕಾರು ರಾಮ ಮಂದಿರದಿಂದ 40 ಭಜನಾ ತಂಡಗಳಿಂದ ನಗರ ಭಜನಾ ಮೆರವಣಿಗೆ ನಡೆಯಲಿದೆ

RELATED ARTICLES
- Advertisment -
Google search engine

Most Popular