Monday, March 17, 2025
Homeಉಡುಪಿಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ತಾಲೂಕು ಅಭ್ಯಾಸ ವರ್ಗ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ತಾಲೂಕು ಅಭ್ಯಾಸ ವರ್ಗ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ತಾಲೂಕು ಅಭ್ಯಾಸ ವರ್ಗವು ದಿನಾಂಕ 23-11-2024 ಶನಿವಾರದಂದು ಕಡಿಯಾಳಿಯ ಕಾತ್ಯಾಯನಿ ಮಂಟಪದಲ್ಲಿ ಸಂಪನ್ನಗೊಂಡಿತು. ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಮುರಳಿ ಕೃಷ್ಣ ಉಪಾಧ್ಯಾಯರು ಉದ್ಘಾಟಿಸಿ ಶುಭಾಶಯವನ್ನು ತಿಳಿಸಿದರು. ಉದ್ಘಾಟನಾ ಅವಧಿಯಲ್ಲಿ ಮಂಗಳೂರು ವಿಭಾಗ ಸಂಚಾಲಕರಾದ ಗಣೇಶ್ ಪೂಜಾರಿ, ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯೆಯಾದ ಸಂಹಿತಾ ಕೆ. ಹಾಗೂ ತಾಲೂಕು ಸಂಚಾಲಕರಾದ ಶ್ರೇಯಸ್ ಅಂಚನ್ ಉಪಸ್ಥಿತರಿದ್ದರು.

ವಿವಿಧ ಸಂಘಟನಾತ್ಮಕ ಅವಧಿಗಳ ನಂತರ ಸಮಾರೋಪ ಸಮಾರಂಭವು ಜರುಗಿತು. ಜಿಲ್ಲಾ ಸಂಚಾಲಕರಾದ ಕಾರ್ತಿಕ್ ಎಂ 2024-25ನೇ ಸಾಲಿನ ಉಡುಪಿ ನಗರದ ನೂತನ ಕಾರ್ಯಕಾರಿಣಿಯನ್ನು ಘೋಷಿಸಿದರು. ತಾಲೂಕು ಸಂಪರ್ಕ ಪ್ರಮುಖರಾಗಿ ರುಕ್ಮಿಣಿ ಶೆಡ್ತಿ ಕಾಲೇಜಿನ ವಿದ್ಯಾರ್ಥಿ ಶ್ರೀಜಿತ್ ನಗರ ಅಧ್ಯಕ್ಷರಾಗಿ ಎಸ್.ಡಿ.ಎಂ ಆಯುರ್ವೇದ ಕಾಲೇಜು ಉದ್ಯಾವರದ ಪ್ರಾಧ್ಯಾಪಕರಾದ ಸದಾನಂದ ಭಟ್ ಕಾಪು ಅವರನ್ನು ಮರು ಆಯ್ಕೆ ಮಾಡಲಾಯಿತು ಹಾಗೂ ಉಪಾಧ್ಯಕ್ಷರಾಗಿ ವೈಕುಂಠ ಬಾಳಿಗ ಕಾನೂನು ಕಾಲೇಜಿನ ಅತಿಥಿ ಉಪನ್ಯಾಸಕರಾದ ಪ್ರವೀಣ್ ಆಚಾರ್ಯ ಅವರನ್ನು ಆರಿಸಲಾಯಿತು. ನಗರ ಕಾರ್ಯದರ್ಶಿಯಾಗಿ ಪೂರ್ಣ ಪ್ರಜ್ಞಾ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿನಿ ಮಾಣಿಕ್ಯ ಭಟ್ ಸಹ ಕಾರ್ಯದರ್ಶಿಯಾಗಿ ವೈಕುಂಠ ಬಾಳಿಗ ಕಾನೂನು ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿ ಶಿವನ್, ನಗರ ಸಂಪರ್ಕ ಪ್ರಮುಖ್ ಆಗಿ ಮನೀಶ್, ಕಾರ್ಯಾಲಯ ಪ್ರಮುಖ್ ಆಗಿ ರಕ್ಷಿತಾ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ಘೋಷಿಸಲಾಯಿತು.

ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ನಿಕಟಪೂರ್ವ ನಗರ ಕಾರ್ಯದರ್ಶಿ ಹಾಗೂ ಕರ್ನಾಟಕ ದಕ್ಷಿಣ ಪ್ರಾಂತ ಸಾಮಾಜಿಕ ಜಾಲತಾಣ ಸಹ ಸಂಚಾಲಕರಾದ ಶ್ರೀವತ್ಸ ಡಿ ಗಾಂವ್ಸ್‌ಕರ್ ನೂತನ ಕಾರ್ಯಕಾರಿಣಿಗೆ ಶುಭ ಕೋರಿ ಮುಂದಿನ ಕಾರ್ಯ ಯೋಜನೆಯನ್ನು ಚರ್ಚಿಸಿದರು.

ಅಭ್ಯಾಸ ವರ್ಗದಲ್ಲಿ ಮಂಗಳೂರು ವಿಭಾಗ ಸಾಮಾಜಿಕ ಜಾಲತಾಣ ಪ್ರಮುಖರಾದ ನವೀನ್, ವಿಭಾಗ ಖೇಲೋ ಭಾರತ್ ಪ್ರಮುಖರದ ಸ್ವಸ್ತಿಕ್ ಪೂಜಾರಿ, ಜಿಲ್ಲಾ ಎಸ್.ಎಫ್.ಡಿ ಪ್ರಮುಖರಾದ ಕಿಶೋರ್, ಉಡುಪಿ ತಾಲೂಕು ಸಹ ಸಂಚಾಲಕರಾದ ಅನಂತಕೃಷ್ಣ  ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular