ನವದೆಹಲಿ: ಇವಿಎಂ ಕುರಿತ ತನ್ನ ಸಂದೇಹವನ್ನು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮತ್ತೊಮ್ಮೆ ಮುನ್ನೆಲೆಗೆ ತಂದಿದ್ದಾರೆ. ಇವಿಎಂ ಬಗ್ಗೆ ನನಗೆ ನಿನ್ನೆಯೂ ಭರವಸೆ ಇರಲಿಲ್ಲ. ಇಂದೂ ಭರವಸೆ ಇಲ್ಲ. ಉತ್ತರ ಪ್ರದೇಶದಲ್ಲಿ 80ಕ್ಕೆ 80 ಸೀಟು ಗೆದ್ದರೂ ನಂಬಿಕೆ ಬರುವುದಿಲ್ಲ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಅವರು ಮಾತನಾಡಿದರು. ಇವಿಎಂ ವಿರುದ್ಧ ಎಸ್ಪಿ ಹೋರಾಟ ಮಾಡುತ್ತಲೇ ಇದೆ. ಇವಿಎಂ ಮೂಲಕವೇ ಗೆದ್ದು ಇವಿಎಂ ರದ್ದು ಮಾಡುತ್ತೇವೆ ಎಂದು ಅವರು ಹೇಳಿದರು. ಅಖಿಲೇಶ್ ಹೇಳಿಕೆಗೆ ರಾಹುಲ್ ಗಾಂಧಿ, ದಯಾನಿಧಿ ಮಾರನ್ ಸೇರಿದಂತೆ ಪ್ರತಿಪಕ್ಷಗಳ ನಾಯಕರು ಮೇಜು ಕುಟ್ಟಿ ಬೆಂಬಲ ವ್ಯಕ್ತಪಡಿಸಿದರು.