Monday, July 15, 2024
Homeಮೂಡುಬಿದಿರೆಅಳಿಯೂರು ಬಸದಿ ಅರ್ಚಕ ಶ್ರೀ ರತ್ನವರ್ಮ ಇಂದ್ರನಿಗೆ ವಜ್ರಶ್ರೀ ಪುರಸ್ಕಾರ  ಪ್ರದಾನ

ಅಳಿಯೂರು ಬಸದಿ ಅರ್ಚಕ ಶ್ರೀ ರತ್ನವರ್ಮ ಇಂದ್ರನಿಗೆ ವಜ್ರಶ್ರೀ ಪುರಸ್ಕಾರ  ಪ್ರದಾನ

ಭಾರತೀಯ ಜೈನ್ ಮಿಲನ್ ಮೂಡುಬಿದಿರೆಯ ಮಾಸಿಕ ಸಭೆಯು ಮಾರ್ಚ್ 24 ರಂದು ವಾಲ್ಪಾಡಿ ಬಸದಿಯಲ್ಲಿ ವೀರ್ ಆನಡ್ಕ ದಿನೇಶ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ನಡೆದು ವೀರ್ ಶ್ರೀಪಾಲ್ ಎಸ್ ಮೂಡುಬಿದ್ರಿ ಇವರು ತನ್ನ ಮಾತೃ ಶ್ರೀ ದಿವಂಗತ ರಾಜಮತಿ ಶಾಂತಿರಾಜ ಶೆಟ್ಟಿ ಮತ್ತು ಪತ್ನಿ ನಗರೇಶ್ವರ ವಜ್ರಮ್ಮ ಇವರುಗಳ  ನೆನಪಿನೊಂದಿಗೆ ಪ್ರತಿ ವರ್ಷ ನಿಷ್ಠಾವಂತ ಅರ್ಹ ಅರ್ಚಕರನ್ನು ಗುರುತಿಸಿ ನೀಡುವ ಅರ್ಚಕ ಪುರಸ್ಕಾರವನ್ನು ಈ ಬಾರಿ ಕಳೆದ 64 ವಷ೯ಗಳಿಂದ ಅಳಿಯೂರು ಬಸದಿಯಲ್ಲಿ ನಿರಂತರ ಪೂಜಾ ಕೈಂಕರ್ಯಗಳನ್ನು ಮಾಡುತಿರುವ ಅರ್ಚಕ ಶ್ರೀ ರತ್ನ ವರ್ಮ ಇಂದ್ರ ಇವರನ್ನು ಪುರಸ್ಕರಿಸಿ ಅವರ ಸಹದರ್ಮಿನಿ ವಿನಯರೊಂದಿಗೆ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಅಧ್ಯಕ್ಷ ವೀರ್ ದಿನೇಶ್ ಆನಡ್ಕ , ಮುಖ್ಯ ಅತಿಥಿ ವಿರಾಂಗನಾ ಶ್ವೇತ ಜೈನ್ , ಕಾರ್ಯದರ್ಶಿ ರಾಜೇಶ್ ಕುಮಾರ್, ಕೋಶಾಧ್ಯಕ್ಷ ಪುಷ್ಪಾರಾಜ ಜೈನ್, ವೀರ್ ಪ್ರಭಾಚಂದ್ರ ಜೈನ್, ರತ್ನ ರಾಜ್ ಶೆಟ್ಟಿ, ವೀರ್ ಶ್ರೀಪಾಲ್ ಎಸ್, ವೀರ್ ಅನಂತವೀರ್, ವಿರಾಂಗನಾ ಕೇಸರಿ ರವಿರಾಜ್ ಶೆಟ್ಟಿ ಇವರುಗಳು ಶಾಲು, ಹಾರ, ಸ್ಮರಣಿಕೆ, ಪ್ರಶಸ್ತಿ ಪತ್ರ, ಹಣ್ಣು ಹಂಪಲು ಮತ್ತು ನಗದು ಪುರಸ್ಕಾರ ನೀಡಿ ಗೌರವಿಸಿ ಅಭಿನಂದಿಸಿದರು. ಪ್ರಶಸ್ತಿ ಪುರಸ್ಕೃತರನ್ನು ವೀರ್ ಶ್ರೀಪಾಲ್ ಎಸ್ ಪರಿಚಯಿಸಿ ಅಭಿನಂದಿಸಿದರು.

ಮುಖ್ಯ ಅತಿಥಿ ವಲಯ ಎಂಟರ ಜೊತೆ ಕಾರ್ಯದರ್ಶಿ ವಿರಾಂಗನಾ ಶ್ವೇತ ಜೈನ್ ಇವರು ಆದರ್ಶ ಜೈನ್ ಮಹಿಳೆಯರು ಇವರ ಬಗ್ಗೆ ಮನೋಜ್ಞ ಮಾತುಗಳನ್ನು ಆಡಿದರು. ಈ ಸಭೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು

ಅಧ್ಯಕ್ಷರ ವೀರ್ ದಿನೇಶ್ ಆನಡ್ಕ ಇವರು ಅಧ್ಯಕ್ಷೀಯ ಮಾತುಗಳೊಂದಿಗೆ ವೇಣೂರು ಮಹಾಮಸ್ತಕಾಭಿಷೇಕದ ಯಶಸ್ವಿಗೆ ಶ್ರಮಿಸಿದ ಮತ್ತು ಮೂಡಬಿದ್ರಿ ಅಮ್ಮನವರ ಬಸದಿ ಪಂಚಕಲ್ಯಾಣದಲ್ಲಿ ಸೇವೆಗೈದ ಹಾಗೂ ಮುನೀವರರ್ಯರುಗಳು ಸೇವೆಯಲ್ಲಿ ತೊಡಗಿಸಿಕೊಂಡ ಸರ್ವರನ್ನು ಕೃತಜ್ಞತ ಪೂರ್ವಕ ಸ್ಮರಿಸಿದರು ಹಾಗೆಯೇ ಮುಂದೆ ನಡೆಯಲಿರುವ ಮಹಾವೀರ ಜಯಂತಿಯ ಕಾರ್ಯಕ್ರಮದಲ್ಲಿ ಎಲ್ಲರೂ ಕೈ ಜೋಡಿಸಬೇಕೆಂದರು . ವಿದ್ಯಾರ್ಥಿ ವೇತನ ನಿಧಿಯ ಹೆಚ್ಚಳಕ್ಕೆ ಎಲ್ಲರ ನೆರವನ್ನು ನಿರೀಕ್ಷಿಸಿದರು .

ವೀರ್ ಪ್ರಭಾಚಂದ್ರ ಜೈನ್ ಸರ್ವರನ್ನು ಸ್ವಾಗತಿಸಿದರು. ವೀರ್ ರಾಜೇಶ್ ಕುಮಾರ್ ವಂದಿಸಿದರು. ಧೃತಿ, ಕ್ಷಿಪ್ರ, ಅಧ್ವಿತ್ ,ಫೀಶಾಲ್ ಪ್ರಾಥಿ೯ಸಿದರು. ವೀರ್ ಗುಣಪಾಲ್ ಮುಖ್ಯ ವಂದಿಸಿದರು. ವೀರ್ ರಾಜೇಂದ್ರ ಕುಮಾರ್ ನಿರೂಪಿಸಿದ ಸಭೆಯು ವೀರ್ ಶ್ರೀಪಾಲ್ ಎಸ್ ಇವರ ಶಾಂತಿ ಮಂತ್ರದೊಂದಿಗೆ ಕೊನೆಗೊಂಡಿತು.

RELATED ARTICLES
- Advertisment -
Google search engine

Most Popular