Saturday, September 14, 2024
Homeರಾಜ್ಯಸಾಧನೆಯ ಹಾದಿಯಲ್ಲಿ ಎಲ್ಲರೂ ಏಕಾಂಗಿ: ಬಿ. ಪುರಂದರ ಭಟ್

ಸಾಧನೆಯ ಹಾದಿಯಲ್ಲಿ ಎಲ್ಲರೂ ಏಕಾಂಗಿ: ಬಿ. ಪುರಂದರ ಭಟ್

ಚಿಗುರೆಲೆ ಸಾಹಿತ್ಯ ಬಳಗದ ದ್ವಿತೀಯ ವಾರ್ಷಿಕೋತ್ಸವವು 14.4.2024ರ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ,ಅಂಬೇಡ್ಕರ್ ದಿನಾಚರಣೆ,ದಿವ್ಯಾಂಗ ಚೇತನರಿಗೆ ಕವಿಗೋಷ್ಠಿ ಮತ್ತು ಕೃತಿ ಬಿಡುಗಡೆ ಸಮಾರಂಭವು ಅನುರಾಗವಠಾರದಲ್ಲಿ ನಡೆಯಿತು. ದೀಪ ಬೆಳಗಿಸಿ, ಗಿಡಕ್ಕೆ ನೀರುಣಿಸಿ ಉದ್ಘಾಟಿಸಿ “ಸಾಧನೆಯ ಹಾದಿಯಲ್ಲಿ ಎಲ್ಲರೂ ಏಕಾಂಗಿಯಾಗಿ ಇರುತ್ತಾರೆ ಆಮೇಲೆ ಮುಂದಕ್ಕೆ ಹೋದಂತೆ ಸಮಾನ ಮನಸ್ಕರು ಸೇರಿಕೊಳ್ಳುತ್ತಾರೆ “ಎಂದು ಹಿರಿಯ ಸಾಹಿತಿಗಳು ಮತ್ತು ಕರ್ನಾಟಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಬಿ. ಪುರಂದರ ಭಟ್ ಆಶಿಸಿದರು.

ಮುಖ್ಯ ಅತಿಥಿಗಳಾಗಿ ವಿವೇಕಾನಂದ ಕಾಲೇಜು ಪುತ್ತೂರು ಇಲ್ಲಿನ ಪರೀಕ್ಷಾಂಗ ಕುಲಸಚಿವರಾದ ಡಾ ಹೆಚ್ ಜಿ ಶ್ರೀಧರ್ ಮಾತನಾಡಿ “ಸಾಹಿತ್ಯದಲ್ಲಿ ಪ್ರಾಸ ಮಾತ್ರವಲ್ಲ ಲಯ ಛಂದಸ್ಸು ಮಾತ್ರೆ ಗಣಗಳನ್ನು ಒಳಗೊಂಡು ಕೃತಿ ರಚಿಸಲು ಪ್ರಬುದ್ಧರಾಗಬೇಕಿದ್ರೆ ಕನ್ನಡ ಸಾಹಿತ್ಯ ಪರಿಷತ್ತು ಮೂಲಕ ಕಾವ್ಯ ಕಮ್ಮಟಗಳು ಆಯೋಜನೆಯಾಗಬೇಕಿದೆ ಯೆಂದರು “. ರಂಗಕರ್ಮಿ ಮತ್ತು ಪತ್ರಕರ್ತರಾದ ಸಂಶುದ್ದೀನ್ ಸಂಪ್ಯರವರು “ಚಿಗುರೆಲೆ ಸಾಹಿತ್ಯ ಬಳಗದ ಮೂಲಕ ಹಲವಾರು ಪ್ರತಿಭೆಗಳು ಹೊರ ಬರುತ್ತಿರುವುದು ಹೆಮ್ಮೆಯ ವಿಚಾರ,ಕಲೆ ಮತ್ತು ಸಾಹಿತ್ಯ ಮನಸ್ಸಿನ ಸಂತೋಷ ಇಮ್ಮಡಿಗೊಳಿಸಲು ಪೂರಕವಾಗಿದೆ ಇಂದಿನ ಸಮಾಜಕ್ಕೆ” ಎಂದು ಶುಭ ಹಾರೈಸಿದರು. ಚಿಗುರೆಲೆ ಸಾಹಿತ್ಯ ಬಳಗದ ಸ್ಥಾಪಕಧ್ಯಕ್ಷರಾದ ಚಂದ್ರ ಮೌಳಿ ಕಡಂದೇಲು ಶುಭ ಹಾರೈಸಿದರು.

ಕೃತಿ ಲೋಕಾರ್ಪಣೆ:ಸುನೀತಾ ಶ್ರೀರಾಮ್ ಕೊಯಿಲ ರವರ ಆಶಯ ಚೊಚ್ಚಲ ಕವನ ಸಂಕಲನವನ್ನು ಹಿರಿಯ ಸಾಹಿತಿಗಳು, ಮಧು ಪ್ರಪಂಚ ಪತ್ರಿಕೆಯ ಪ್ರಧಾನ ಸಂಪಾದಕರು ಆಗಿರುವ ನಾರಾಯಣ ರೈ ಕುಕ್ಕುವಳ್ಳಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಕು. ಪಾವನಿ. ಬಿ. ನಲ್ಕ ರವರ ಸಪ್ತಮಿ ಚೊಚ್ಚಲ ಕವನಸಂಕಲನವನ್ನು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಪರಿಮಳ ಮಹೇಶ್ ರಾವ್ ಲೋಕಾರ್ಪಣೆ ಗೊಳಿಸಿ ಶುಭ ಹಾರೈಸಿದರು. ನಾರಾಯಣ ಕುಂಬ್ರ ಸಾಹಿತ್ಯದ ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ್ ರೈ ನಿರ್ಮಾಣದ ಬಿಲ್ವಾರ್ಚನೆ ಪುತ್ತೂರು ಮಹಾಲಿಂಗೇಶ್ವರ ದೇವರ ಭಕ್ತಿ ಧ್ವನಿ ಸುರುಳಿಯನ್ನು ನಾಟ್ಯ ಮಯೂರಿ ಬಿರುದಾಂಕಿತ ಕು. ಶ್ರೇಯಾ ಮೇರ್ಕಜೆ ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.

ದಿವ್ಯಾಂಗ ಚೇತನ ಕವಿಗೋಷ್ಠಿ: ಬಳಗದ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಚೇತನ ಪ್ರತಿಭೆಗಳಾದ ಕು. ಧನ್ಯಶ್ರೀ, ಕು, ಮಾನ್ಯ ಮತ್ತು ಮಲ್ಲಿಕಾ ಐ ಹಿರೇಬಂಡಾಡಿಯವರಿಂದ ಕವಿಗೋಷ್ಠಿ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ರವರು ಮಾತನಾಡಿ “ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರಿನ ದೊಡ್ಡ ಶಕ್ತಿ ಚಿಗುರೆಲೆ ಸಾಹಿತ್ಯ ಬಳಗ ಆಗಿದ್ದು, ಸಾಹಿತ್ಯ ಪರಿಷತ್ತಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಕೈ ಜೋಡಿಸುತ್ತಿದೆಯೆಂದರು”.

ಗೌರವಾರ್ಪಣೆ:-ಕೃತಿ ಬಿಡುಗಡೆಗೊಳಿಸಿದ ನಾರಾಯಣ ರೈ ಕುಕ್ಕುವಳ್ಳಿ, ಪರಿಮಳ ಮಹೇಶ್ ರಾವ್ ವರನ್ನು ಕೃತಿ ಕಾರರು ಗೌರವಾರ್ಪಣೆ ಸಲ್ಲಿಸಿದರು. ಕೃತಿಕಾರರಾದ ಸುನೀತಾ ಶ್ರೀರಾಮ ಕೊಯಿಲ ಮತ್ತು ಕು. ಪಾವನಿ ಬಿ ನಲ್ಕ ರವರನ್ನು ರಂಗಕರ್ಮಿ ಮತ್ತು ಪತ್ರಕರ್ತರಾದ ಸಂಶುದ್ಧಿನ್ ಸಂಪ್ಯ ಅಭಿನಂದಿಸಿದರು. ಬಿಲ್ವಾರ್ಚನೆ ಧ್ವನಿ ಸುರುಳಿಯ ಗಾಯಕರಾದ ರವಿ ಪಾಂಬಾರು,ಸಹ ಗಾಯಕರಾದ ಸುಜಾತ ಪುರಂದರ ಕಲ್ಲಡ್ಕ, ಸೌಮ್ಯರಾಮ್ ಕಲ್ಲಡ್ಕ, ರಶ್ಮಿತಾ ಸುರೇಶ ಜೋಗಿಬೆಟ್ಟು, ಸಹಕಾರ ನೀಡಿದ ಹರಿಣಾಕ್ಷಿ ಉಮೇಶ್ ನೇರಳಕಟ್ಟೆ, ಆಲ್ಬಮ್ ಹಾಡು ಬಿಡುಗಡೆಗೊಳಿಸಿದ ಶ್ರೇಯಾ ಮೇರ್ಕಜೆಯವರನ್ನು ಗೌರವಿಸಲಾಯಿತು.

ಸಾಹಿತ್ಯ ಕಾರ್ಯಕ್ರಮ ಪ್ರಕೃತಿ ಪ್ರೇಮ ಯುವ ಸಾಹಿತಿ ಸುಪ್ರೀತಾ ಚರಣ್ ಪಾಲಪ್ಪೆಯವರ ಪರಿಕಲ್ಪನೆಯಲ್ಲಿ ಸಭಾ ಕಾರ್ಯಕ್ರಮಕ್ಕೆ ಮೊದಲು ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪ ನಮನದೊಂದಿಗೆ ಗಣ್ಯರು ಗೌರವ ಸಲ್ಲಿಸಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಯಿತು. ಸಮಾರಂಭ ಉದ್ಘಾಟನೆ ಹಸಿರು ಗಿಡಕ್ಕೆ ನೀರೆರೆಯುವ ಮೂಲಕ, ಗಣ್ಯರು, ಗೌರವ ಸಮರ್ಪಣೆಯಲ್ಲಿ ಸ್ಮರಣಿಕೆ ಬದಲು ಹೂವಿನ ಗಿಡ ನೀಡಲಾಯಿತು.ಸುರೇಶ ಚಾರ್ವಾಕ ಪ್ರಾರ್ಥನೆಯೊಂದಿಗೆ, ಪೂರ್ಣಿಮಾ ಪೆರ್ಲಂಪಾಡಿ ಸ್ವಾಗತಿಸಿ, ನಾರಾಯಣ ಕುಂಬ್ರ ಪ್ರಸ್ತಾವನೆ ಮತ್ತು ವರದಿ ಮಂದಿಸಿದರು. ಪ್ರತೀಕ್ಷಾ ಆರ್ ಕಾವು ವಂದನಾರ್ಪಣೆಗೈದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

RELATED ARTICLES
- Advertisment -
Google search engine

Most Popular