ಬೆಂಗಳೂರು; ಅಖಂಡ ಭಾರತ ಖಾದಿ ಮಹಾ ಸಂಘಟನೆಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಬಸವನಗುಡಿಯ ಆಚಾರ್ಯ ಪಾಠಶಾಲಾ ಟ್ರಸ್ಟ್ ಕಚೇರಿಉಲ್ಲಿ ಮನೆಯಂಗಳದಲ್ಲಿ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಿತು.
ಮೂರು ಪ್ರಮುಖ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು. “ವಿಶ್ವಗುರು ಬಸವೇಶ್ವರ ಪ್ರಶಸ್ತಿಯನ್ನು” ಆಚಾರ್ಯ ಪಾಠಶಾಲಾ ಕಾಲೇಜು ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಬಹು ಸಮಾಜಮುಖಿ ಚಿಂತಕರಾಗಿರುವಂತಹ ಡಾ. ವಿಷ್ಣು ಭಾರತ್ ಅಲಂಪಲ್ಲಿ ರವರಿಗೆ ಪ್ರಧಾನ ಮಾಡಿ ಗೌರವಿಸಲಾಯಿತು.
ಶ್ರೇಷ್ಠ ವೈದ್ಯ ನಾರಾಯಣ ಸೇವಾ ರತ್ನ “ಪ್ರಶಸ್ತಿಯನ್ನು ಆಯುರ್ವೇದ ವೈದ್ಯರು ಹಾಗೂ ಯೋಗ ಗುರುಗಳಾದ ಡಾ. ಕೆ. ಕೃಷ್ಣಮೂರ್ತಿ, “ಕರ್ನಾಟಕ ವಜ್ರ ಸ್ತ್ರೀ” ಪ್ರಶಸ್ತಿಯನ್ನು ಲಯನ್ ಗಾಯತ್ರಿ ಗಿರೀಶ ಅವರಿಗೆ ಪ್ರದಾನ ಮಾಡಲಾಯಿತು.
ಎ.ಬಿ. ಕೆ.ಎಂ. ನ. ಅಧ್ಯಕ್ಷರಾದ ಡಾ. ನಿವೇದಿತ ಹಾಗೂ ಪದಾಧಿಕಾರಿಗಳಾದ ಸಹನಾ ಭಟ್, ಕ್ಷಮಾಸತೀಶ್ ಲಕ್ಷ್ಮಿ ಎಸ್.ವಿ., ರಾಧಾ, ಪುರುಷೋತ್ತಮ್, ಚಂದ್ರ ಮತ್ತಿತರರು ಉಪಸ್ಥಿತರಿದ್ದರು.