Sunday, July 14, 2024
Homeಅಪರಾಧಮೊಬೈಲ್ ಕರೆನ್ಸಿ ಹಾಕಿಸಲು ಬಂದಿದ್ದ ಹಿಂದೂ ಯುವತಿಯ ಫೋಟೊ ತೆಗೆದ ಅನ್ಯಕೋಮಿನ ಯುವಕ: ದೂರು

ಮೊಬೈಲ್ ಕರೆನ್ಸಿ ಹಾಕಿಸಲು ಬಂದಿದ್ದ ಹಿಂದೂ ಯುವತಿಯ ಫೋಟೊ ತೆಗೆದ ಅನ್ಯಕೋಮಿನ ಯುವಕ: ದೂರು

ಸುಳ್ಯ: ಕರೆನ್ಸಿ ಹಾಕಿಸಲೆಂದು ಬಂದ ಯುವತಿಯ ಫೋಟೊ ತೆಗೆದ ಅನ್ಯಕೋಮಿನ ಯುವಕನ ಮೇಲೆ ಯುವತಿಯ ಹೆತ್ತವರು ದೂರು ನೀಡಿದ್ದಾರೆ. ಗಾಂಧಿನಗರದ ಏರ್ ಟೆಲ್ ಮಳಿಗೆಗೆ ಕರೆನ್ಸಿ ಹಾಕಿಸಲೆಂದು ಬಂದಿದ್ದ ಯುವತಿಯ ಫೋಟೊ ಅನ್ಯಕೋಮಿನ ಯುವಕ ತೆಗೆದಿದ್ದ ಎನ್ನಲಾಗಿದೆ.

ಗಾಂಧಿನಗರದ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಹಿಂದೂ ಯುವತಿ ಮೊಬೈಲ್ ರಿಚಾರ್ಜ್ ಗೆ ಬಂದಿದ್ದ ವೇಳೆ ಆರೋಪಿಯು ಆಕೆಯ ಅರಿವಿಗೆ ಬರದಂತೆ ಫೋಟೊ ಕ್ಲಿಕ್ಕಿಸಿದ್ದಾನೆ. ಇದನ್ನು ಗಮನಿಸಿದ ಯುವತಿ ಆಕ್ಷೇಪಿಸಿರುವುದಲ್ಲದೆ, ಆತನ ಮೊಬೈಲ್ ಕಸಿದು ನೋಡಿದಾಗ ತನ್ನ ಫೋಟೊ ಇರುವುದನ್ನು ನೋಡಿ ಗಾಬರಿಯಿಂದ ಅದನ್ನು ಡಿಲೀಟ್ ಮಾಡಿದ್ದಾಳೆ. ಬಳಿಕ ಮನೆಗೆ ಬಂದು ವಿಷಯ ತಿಳಿಸಿದ್ದಾಳೆ. ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಯುವಕನನ್ನು ಕರೆತಂದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಬಗ್ಗೆ ತಿಳಿದು ಹಿಂದೂ ಸಂಘಟನೆಯ ಕಾರ್ಯಕರ್ತರು ಠಾಣೆಯ ಎದುರು ಜಮಾಯಿಸಿದ್ದರು.   

RELATED ARTICLES
- Advertisment -
Google search engine

Most Popular