Sunday, January 19, 2025
Homeಪುತ್ತೂರುಪುತ್ತೂರಿನಲ್ಲಿ ಶಿಕ್ಷಕರಿಂದ ಮಾನಸಿಕ ಕಿರುಕುಳ ಆರೋಪ: ವಿದ್ಯಾರ್ಥಿನಿ ಕೈಗೆ ಸಿಕ್ಕ ಮಾತ್ರೆಗಳನ್ನು ನುಂಗಿ ಅಸ್ವಸ್ಥ

ಪುತ್ತೂರಿನಲ್ಲಿ ಶಿಕ್ಷಕರಿಂದ ಮಾನಸಿಕ ಕಿರುಕುಳ ಆರೋಪ: ವಿದ್ಯಾರ್ಥಿನಿ ಕೈಗೆ ಸಿಕ್ಕ ಮಾತ್ರೆಗಳನ್ನು ನುಂಗಿ ಅಸ್ವಸ್ಥ

ಪುತ್ತೂರು: ಶಿಕ್ಷಕರ ನೀಡುತ್ತಿದ್ದ ಮಾನಸಿಕ ಕಿರುಕುಳದಿಂದ ನೊಂದು ಪುತ್ತೂರಿನ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿಯೊಬ್ಬಳು ಕೈಗೆ ಸಿಕ್ಕ ಮಾತ್ರೆಗಳನ್ನು ನುಂಗಿ ಅಸ್ವಸ್ಥಗೊಂಡಿರುವ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.

ವಿದ್ಯಾರ್ಥಿನಿ ಬೆಳ್ತಂಗಡಿಯ ತಣ್ಣೀರುಪಂಥ ಗ್ರಾಮದವಳಾಗಿದ್ದು, ಬಲ್ನಾಡು ಉಜ್ರುಪಾದೆ ಅಜ್ಜಿ ಮನೆಯಿಂದ ಶಾಲೆಗೆ ಬರುತ್ತಿದ್ದಳು. ವಿದ್ಯಾರ್ಥಿನಿಗೆ ಶಿಕ್ಷಕರು ಪ್ರತಿನಿತ್ಯ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ವಿದ್ಯಾರ್ಥಿನಿಯ ಪೊಷಕರು ಮಕ್ಕಳ ಹಕ್ಕು ಕಾಯ್ದೆಯಡಿ ದೂರು ನೀಡಿದಾಗ ಮಕ್ಕಳ ಸಹಾಯವಾಣಿ ಕೇಂದ್ರದಿಂದ ಶಾಲೆಗೆ ಬಂದು ವಿಚಾರಿಸಿದ್ದಾರೆ. ಇದೇ ನೆಪವನ್ನು ಇಟ್ಟು ಮತ್ತೆ ವಿದ್ಯಾರ್ಥಿನಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಡಿ. 30ರಂದು ಬೆಳಗ್ಗೆ ಶಾಲೆಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿನಿ ಮನೆಯಲ್ಲಿ ತಂದಿಟ್ಟಿದ್ದ ಗುಳಿಗೆಗಳನ್ನು ನುಂಗಿ ಆಸ್ವಸ್ಥಗೊಂಡಿದ್ದಳು. ತಕ್ಷಣ ಮನೆಯವರು ಪುತೂರಿನ ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಚೇತರಿಸಿಕೊಂಡಿದ್ದಾಳೆ. ಈ ಕುರಿತು. ವಿದ್ಯಾರ್ಥಿನಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ಕುರಿತು ವಿದ್ಯಾರ್ಥಿನಿಯ ಪೋಷಕರನ್ನು ಮತ್ತು ಶಾಲಾ ಶಿಕ್ಷಕರನ್ನು ಠಾಣೆಗೆ ಕರೆಸಿ ಮಾತುಕತೆ ನಡೆಸಲಾಗಿದೆ ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular