Thursday, December 5, 2024
HomeUncategorizedಹಸಿವು ನೀಗಿಸುವಿಕೆ ಮಾನವೀಯತೆಯ ಮೊದಲ ಕಾರ್ಯವಾಗಬೇಕು

ಹಸಿವು ನೀಗಿಸುವಿಕೆ ಮಾನವೀಯತೆಯ ಮೊದಲ ಕಾರ್ಯವಾಗಬೇಕು

ಕಾರ್ಕಳ/ಮೂಲ್ಕಿ:ಯೇನೆಪೋಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸಾಯನ್ಸ್, ಕಾಮರ್ಸ್ ಏಂಡ್ ಮ್ಯಾನೇಜ್ಮೆಂಟ್, ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪಯರ್ ಹಾಗೂ ಲಿಯೋ ಕ್ಲಬ್ ಯೆನ್ ಇನ್ಸ್ಪಯರ್ ವತಿಯಿಂದ ಅಕ್ಟೋಬರ್ ಹದಿನಾರರಂದು ಅಂತರಾಷ್ಟ್ರೀಯ ಆಹಾರ ದಿನದ ಅಂಗವಾಗಿ ಕಾರ್ಕಳದ ಸುರಕ್ಷಾ ಸೇವಾಶ್ರಮ ಅನಾಥಾಲಯದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಲಯನ್ಸ್ ಕ್ಲಬ್ ಉಪಾಧ್ಯಕ್ಷ ಪುಷ್ಪರಾಜ್ ಚೌಟ ಅಸಹಾಯಕರ ಹಸಿವು ನೀಗಿಸುವ ಕೆಲಸ ದೇವರು ಮೆಚ್ಚುವಂತಾದ್ದು, ಅದು ಮಾನವೀಯತೆಯ ಮೊದಲ ಕಾರ್ಯ ಎಂದರು. ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪಯರ್ ನಿಕಟಪೂರ್ವ ಅಧ್ಯಕ್ಷರಾದ ಲ|ಎನ್. ಸುಧೀರ್ ಬಾಳಿಗ, ಲಿಯೋ ಅಧ್ಯಕ್ಷ ಮೊಹಮ್ಮದ್ ಝಿಶಾನ್, ಲಿಯೋ ಸಲಿತ್, ಲಿಯೋ ಶಮ್ನಾನ್, ಸಂಶೋಧನಾರ್ಥಿ ವಂದನ ಶೆಣೈ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಸೇವಾಶ್ರಮದ ಮುಖ್ಯಸ್ಥೆ ಆಯೇಶಾ ಭಾನು ಲಯನ್ಸ್ ಮತ್ತು ಲಿಯೋದ ಈ ಸೇವಾಮನೋಭಾವಕ್ಕೆ ಧನ್ಯವಾದ ಸಮರ್ಪಿಸಿದರು.

RELATED ARTICLES
- Advertisment -
Google search engine

Most Popular