ದಾವಣಗೆರೆ- ಪ್ರಸ್ತುತ ದಿನಮಾನಗಳಲ್ಲಿ ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ನಮ್ಮ ಆಧ್ಯಾತ್ಮ ಪರಂಪರೆ ಮರೆಯಾಗುತ್ತಿರುವುದು ವಿಷಾದನೀಯ. ಮಕ್ಕಳಲ್ಲಿ ಶಿಕ್ಷಣದ ಜತೆಯಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರಗಳ ಅಗತ್ಯವಿದೆ. ಈ ಗೋಲ್ಡನ್ ಶಾಲೆ ವಿದ್ಯಾದೇಗುಲವಾಗಿದೆ. ಮುಂದೆ ಈ ಶಿಕ್ಷಣ ಸಂಸ್ಥೆಯು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಯಾಗಲಿ ಎಂದು ಹರಿಹರದ ಕಂಬಳಿಮಠದ ಪ್ರವಚನಾಚಾರ್ಯ ಪರಮಪೂಜ್ಯ ಶ್ರೀ ಗಂಗಾಧರ ಸ್ವಾಮೀಜಿಯವರು ಆಶೀರ್ವದಿಸಿದರು.
ದಾವಣಗೆರೆಯ ಡಿ.ಸಿಎಂ. ಟೌನ್‌ಶಿಪ್‌ನಲ್ಲಿರುವ ಗೋಲ್ಡನ್ಪ ಬ್ಲಿಕ್ ವಿದ್ಯಾಸಂಸ್ಥೆಯ 16ನೇ ವರ್ಷದ ವಾರ್ಷಿಕೋತ್ಸವದ “ಗೋಲ್ಡನ್ ಉತ್ಸವ” ಸಮಾರಂಭವನ್ನು ಇತ್ತೀಚಿಗೆ ಜ್ಯೋತಿ ಬೆಳಗುವುದರೊಂದಿಗೆ ಉದ್ಘಾಟಿಸಿ ಸ್ವಾಮೀಜಿಯವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ದಾವಣಗೆರೆ ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಪುಷ್ಪಲತಾ ಎನ್. ಮಾತನಾಡಿ, ಮಕ್ಕಳ ಶಿಕ್ಷಣದ ಜತೆಯಲ್ಲಿ ಪೋಷಕರೂ ಪ್ರೋತಾಹದೊಂದಿಗೆ ಕೈಜೋಡಿಸಬೇಕಾಗಿದೆ. ಮಕ್ಕಳು ಪರೀಕ್ಷೆಯ ಅಂಕಪಟ್ಟಿಗೆ ಸೀಮಿತವಾಗದೇ ತಮ್ಮ ಮುಂದಿನ ಸಾಧನೆಗೆ ಭವ್ಯ-ದಿವ್ಯ ಭವಿಷ್ಯಕ್ಕೆ ಈಗಲೇ ಭದ್ರವಾದ ಬುನಾದಿ ಹಾಕಬೇಕಾಗಿದೆ. ಶಿಕ್ಷಕ-ಶಿಕ್ಷಕಿಯರು ಪ್ರಾಮಾಣಿಕವಾಗಿ ಬದ್ದತೆಯಿಂದ, ಕರ್ತವ್ಯನಿಷ್ಠೆಯಿಂದ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಶಿಕ್ಷಣ ಸಂಸ್ಥೆಯು ಅಭಿವೃದ್ಧಿಯಾಗುತ್ತದೆ. ಮತ್ತು ಮಕ್ಕಳಿಗೂ ಪರೀಕ್ಷೆಯ ಉತ್ತಮ ಫಲಿತಾಂಶಕ್ಕೆ ಪೂರಕವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ
ಸಾಲಿಗ್ರಾಮ ಗಣೇಶ್ ಶೆಣೈಯವರು ಮಾತನಾಡಿ, ಮುಂದಿನ ತಿಂಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದೊಂದಿಗೆ ಕರ್ನಾಟಕ ಹೃದಯ ಭಾಗವಾದ ಭಾರತದಲ್ಲೇ ಐತಿಹಾಸಿಕ ಪರಂಪರೆಯ ದಾವಣಗೆರೆ ಜಿಲ್ಲೆಗೆ ಪ್ರಥಮ ಸ್ಥಾನ ಬರಬೇಕಾಗಿದೆ ಎಂದು ಆಶಯ. ಈ ಶಿಕ್ಷಣ ಸಂಸೆಯು ಇನ್ನಷ್ಟು ಅಭಿವೃದ್ಧಿಯಾಗಿ ಮುಂದೆ ಕಾಲೇಜು ಹಂತಕ್ಕೆ ಬೆಳೆಯಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಶಿವಕುಮಾರ್ ಕೆ.ಎಂ. ಮಾತನಾಡಿ, ಈ ಶೈಕ್ಷಣಿಕ ಸೇವೆ ದೇವರ ಪೂಜೆ, ಈ ಸಂಸ್ಥೆಗೆ ಸಹಕಾರ, ಸಹಯೋಗ ನೀಡುತ್ತಿರುವ ಪೋಷಕರಿಗೆ, ಆಡಳಿತ ಮಂಡಳಿಗೆ, ಶಿಕ್ಷಕ-ಶಿಕ್ಷಕಿಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ವಿವಿಧ ಸ್ಪಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಪೊಲೀಸ್ ಇಲಾಖೆಯ ಜಿಲ್ಲಾ ಉಪರಕ್ಷಣಾಧಿಕಾರಿಗಳಾದ ಮಂಜುನಾಥ್ ಜಿ., ಗೋಲ್ಡನ್ಪ ಬ್ಲಿಕ್ ಶಾಲೆಯ ವ್ಯವಸ್ಥಾಪಕರಾದ ಮಂಜುನಾಥ್ ಕೆ.ಬಿ, ಮಹಾಂತೇಶ್ ಟಿ., ಜರೀಕಟ್ಟೆಯ ಯುವ ಮುಖಂಡರಾದ ಅಜ್ಜಪ್ಪ ಎಸ್.ಬಿ., ಮುಂತಾದವರು ಈ ಯಶಸ್ವಿ ಸಮಾರಂಭಕ್ಕೆ ಶುಭ ಕೋರಿದರು.
ವಿದ್ಯಾರ್ಥಿನಿಯರಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಸಮಾರಂಭಕ್ಕೆ ಪ್ರಿಯಾಂಕ ಕೆ. ಸ್ವಾಗತಿಸಿದರು, ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಮಾಲಾ ಮಂಜುನಾಥ್ಪ್ರಾ ಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ವಾರ್ಷಿಕ ವರದಿ ಮಂಡಿಸಿದರು. ಎಲ್.ಕೆ.ಜಿ.ಯಿಂದ ಎಸ್.ಎಸ್.ಎಲ್.ಸಿ. ಶಾಲಾ ಮಕ್ಕಳಿಂದ ರಾಮಾಯಣ, ಮಹಾಭಾರತ, ಇತಿಹಾಸದ ಪ್ರಸ್ತುತಿ ಸಮೂಹ ನೃತ್ಯ, ಜನಪದ ನೃತ್ಯಗಳೊಂದಿಗೆ ವಿಜೃಂಭಣೆಯಿಂದ, ಅದ್ಭುತವಾಗಿ ವೈಭವಪೂರ್ಣವಾಗಿ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ನೆರೆದ ಪ್ರೇಕ್ಷಕರ ಮೆಚ್ಚುಗೆ ಪಡೆದರು. ಕೊನೆಯಲ್ಲಿ ಸಹ ಶಿಕ್ಷಕಿ ಸಾಕಮ್ಮ ಪಿ. ವಂದಿಸಿದರು.
