Monday, December 2, 2024
HomeSportಕ್ರೀಡೆಕಿನ್ನಿಗೋಳಿ: ಕ್ರೀಡೆಯ ಜೊತೆಗೆ ಶಿಕ್ಷಣ ಹಾಗೂ ಅಸಹಾಯಕರಿಗೆ ಸಹಾಯ ಹಸ್ತ ಅಭಿನಂದನೀಯ -ಅಶೋಕ್...

ಕಿನ್ನಿಗೋಳಿ: ಕ್ರೀಡೆಯ ಜೊತೆಗೆ ಶಿಕ್ಷಣ ಹಾಗೂ ಅಸಹಾಯಕರಿಗೆ ಸಹಾಯ ಹಸ್ತ ಅಭಿನಂದನೀಯ -ಅಶೋಕ್ ಕುಮಾರ್ ಶೆಟ್ಟಿ

ಮುಲ್ಕಿ: ಕಿನ್ನಿಗೋಳಿ ಸಮೀಪದ ಐಕಳ ಕಾಂತಾ ಬಾರೆ ಬೂದಾ ಬಾರೆ ಫ್ರೆಂಡ್ಸ್ ವತಿಯಿಂದ ಸಾರ್ವಜನಿಕ ಸೇವಾ ಚಟುವಟಿಕೆಗಳ ಸಹಾಯಾರ್ಥ ವಾಲಿಬಾಲ್ ಪಂದ್ಯಾಟ 2024 ಐಕಳ ಕಂಬಳದ ಮಂಜೊಟ್ಟಿ ಗದ್ದೆಯ ಬಳಿ ಮೈದಾನದಲ್ಲಿ ನಡೆಯಿತು.
ಕ್ರೀಡಾಕೂಟವನ್ನು ಐಕಳ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಚೌಟ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.
ಏಳಿಂಜೆ ಶ್ರೀ ಲಕ್ಷ್ಮೀ ಜನಾರ್ದನ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಗಣೇಶ್ ಭಟ್ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ವಹಿಸಿ ಮಾತನಾಡಿ ಸೇವಾ ಸಂಸ್ಥೆಗಳು ಕ್ರೀಡೆಯ ಜೊತೆಗೆ ಶೈಕ್ಷಣಿಕ ಹಾಗೂ ಅಸಹಾಯಕರಿಗೆ ಪ್ರೋತ್ಸಾಹ ಅಭಿನಂದನೀಯವಾಗಿದ್ದು ನಿರಂತರವಾಗಿ ನಡೆಯಲಿ ಎಂದರು ಮುಖ್ಯ ಅತಿಥಿಗಳಾಗಿ ಐಕಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಲಕ್ಷ್ಮಿ ಪೂಜಾರಿ, ಮಾಜೀ ಅಧ್ಯಕ್ಷೆ ಸುಗುಣಾ ಪೂಜಾರಿ,ಸದಸ್ಯೆ ಅನಿತಾ ಡಿ.ಕೋಸ್ತಾ, ದಯೇಶ್ ಕೋಟ್ಯಾನ್, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್ ಕಿನ್ನಿಗೋಳಿ, ಐಕಳ ಬಾವ ದಯಾನಂದ ಶೆಟ್ಟಿ ಸ್ವರಾಜ್ ಶೆಟ್ಟಿ ಮುಂಡ್ಕೂರು ದೊಡ್ಡಮನೆ ಐಕಳ ಕಾಂತಾ ಬಾರೆ ಬೂದಾ ಬಾರೆ ಫ್ರೆಂಡ್ಸ್ ಅಧ್ಯಕ್ಷ ತಾರಾನಾಥ ಶೆಟ್ಟಿ,ಸದಸ್ಯರಾದ ಶ್ರೀಶ ಸರಾಫ್ ಐಕಳ,ಚೇತನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.ಫ್ರೆಂಡ್ಸ್ ಕ್ಲಬ್ ಸದಸ್ಯಚೇತನ್ ಶೆಟ್ಟಿ ಸ್ವಾಗತಿಸಿದರು ಶ್ರೀಶ ನಿರೂಪಿಸಿದರು ಬಳಿಕ ವಾಲಿಬಾಲ್ ಪಂದ್ಯಾಟ ನಡೆಯಿತು.

RELATED ARTICLES
- Advertisment -
Google search engine

Most Popular