ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದವರು ಡಿಸೆಂಬರ್ 2024ರಂದು ನಡೆಸಿದ ಶುಶ್ರೂಷ ಪರೀಕ್ಷೆಯಲ್ಲಿ ಆಳ್ವಾಸ್ ಶುಶ್ರೂಷ ಮಹಾವಿದ್ಯಾಲಯದ ಅಂತಿಮ ವರ್ಷದ ಬೇಸಿಕ್ ಬಿ.ಎಸ್ಸಿ ನರ್ಸಿಂಗ್‌ನ ವಿದ್ಯಾರ್ಥಿನಿಯರು ಒಟ್ಟು ಎಂಟು ರ‍್ಯಾಂಕ್ ಗಳಿಸಿದ್ದಾರೆ. ದಿಯಾ ಬಿಜು ಆರನೇ ರ‍್ಯಾಂಕ್, ಪ್ರಜ್ಞಾ ಆರನೇ ರ‍್ಯಾಂಕ್, ಬೆಸ್ಸಿ ಬಿನಾಯ್ ಏಳನೇ ರ‍್ಯಾಂಕ್, ದೀಕ್ಷಿತಾ ಡಿ ಏಳನೇ ರ‍್ಯಾಂಕ್, ಸಿನ್ಸಿ ಸಾಬು ಎಂಟನೇ ರ‍್ಯಾಂಕ್, ಅನಿಟ್ ಜಾನ್ ಒಂಬತ್ತನೇ ರ‍್ಯಾಂಕ್ , ಸಿಜಿಮೋಲ್ ವಿನ್ಸೆಂಟ್ ಹತ್ತನೇ ರ್ಯಾಂಕ್ ಮತ್ತು ಸಿಲ್ಪಾ ಸಾಬು ಹತ್ತನೇ ರ‍್ಯಾಂಕ್‌ನ್ನು ವಿಷಯವಾರು ಪರೀಕ್ಷೆಯಲ್ಲಿ ಪಡೆದಿರುತ್ತಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ. ಮೋಹನ ಆಳ್ವ ರವರು ಮತ್ತು ಟ್ರಸ್ಟಿ, ಡಾ.ವಿನಯ್ ಆಳ್ವ ರವರು, ಪ್ರಾಂಶುಪಾಲರಾದ ಡಾ. ಬಿ.ಎ. ಯತಿಕುಮಾರ ಸ್ವಾಮಿ ಗೌಡ, ಕಾಲೇಜಿನ ಪ್ರಾಧ್ಯಾಪಕವರ್ಗ ಹಾಗೂ ವಿದ್ಯಾರ್ಥಿನಿಯರಿಗೆ ಅಭಿನಂದನೆ ಸಲ್ಲಿಸಿದರು.
ಆಳ್ವಾಸ್ ವಿದ್ಯಾರ್ಥಿನಿಯರು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಶುಶ್ರೂಷ ಪರೀಕ್ಷೆಯಲ್ಲಿ ಎಂಟು ರ‍್ಯಾಂಕ್ ಗಳಿಸಿದ ಸಾಧನೆ
RELATED ARTICLES