ಶ್ರೀ ಬ್ರಹ್ಮಬೈದರ್ಕಳ ಗರಡಿ,ಕೈಪಂಗಳ ಬಾರಿಕೆ ನರಿಮೊಗರು . ಕ್ಷೇತ್ರದಲ್ಲಿ ಇಂದು “ಅಮರ್ ಬೀರೆರ್”ತುಳು ಭಕ್ತಿ ಸುಗಿಪು ಸಂಜೆ 7.00ಕ್ಕೆ ಬಿಡುಗಡೆಯಾಗಲಿದೆ.ಸಾಹಿತ್ಯ ಕ್ಷೇತ್ರದಲ್ಲಿ ಬರವಣಿಗೆಯಲ್ಲಿ ಛಾಪು ಮೂಡಿಸಿ ತನ್ನದೆ ಆದ ಭಾವಗಳಿಗೆ ರೂಪ ಕೊಟ್ಟು ಸಾಹಿತ್ಯ ಬರೆಯುತ್ತಿರುವ ನವ್ಯದಾಮೋದರ್ ಶಾಂತಿಗೊಡು ಸಾಹಿತ್ಯ ಬರೆದಿದ್ದು. ಗಾಯಕ ಸಾಹಿತಿ. ಲತೀಶ್ ಮಿಜಾರು ಇವರ ಸುಮಧುರ ಕಂಠದಿಂದ ಗಾಯನ ಮೂಡಿ ಬಂದಿದೆ.ಸಂತೋಷ್ ಪುಚ್ಚೇರ್ ಬೆದ್ರ ಟ್ಯಾಬ್ ಸ್ಟೂಡಿಯೊದಲ್ಲಿ ಧ್ವನಿ ಮುದ್ರಣಗೊಂಡು, ಬಾಲೆ ಬಂಗಾರ್ ಕ್ರಿಯೇಶನ್ಸ್ ನವರು ಈ ಭಕ್ತಿಗೀತೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.