Saturday, July 20, 2024
Homeಅಪಘಾತಅಂಬಾ ಟಿವಿ ಮತ್ತು ಹೋಂ ಅಪ್ಲೈಯನ್ಸಸ್ ಶೋರೂಂಗೆ ಬೆಂಕಿ ಅವಘಡ: 1 ಕೋಟಿಗೂ ಹೆಚ್ಚು ನಷ್ಟ

ಅಂಬಾ ಟಿವಿ ಮತ್ತು ಹೋಂ ಅಪ್ಲೈಯನ್ಸಸ್ ಶೋರೂಂಗೆ ಬೆಂಕಿ ಅವಘಡ: 1 ಕೋಟಿಗೂ ಹೆಚ್ಚು ನಷ್ಟ

ತ್ರಾಸಿ ರಾಷ್ಟ್ರೀಯ ಹೆದ್ದಾರಿ ಸಮೀಪವಿರುವ ಪ್ರಸಿದ್ಧ ಅಂಬಾ ಟಿವಿ ಮತ್ತು ಹೋಂ ಅಪ್ಲೈಯನ್ಸಸ್ ಶೋರೂಂಗೆ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿದ್ದು, 1 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ. ಈ ಘಟನೆ ರಾತ್ರಿ 9.45 ಕ್ಕೆ ಸಂಭವಿಸಿದ್ದು, ಬೈಂದೂರು, ಕುಂದಾಪುರ, ಮತ್ತು ಉಡುಪಿಯ ಮೂರು ಅಗ್ನಿಶಾಮಕ ದಳಗಳು ಸ್ಥಳಕ್ಕೆ ತಲುಪಿದ್ದು, ಮುಂಜಾನೆ ನಸುಕಿನ 3 ರವರೆಗೆ ಬೆಂಕಿ ನಂದಿಸುವ ಕಾರ್ಯ ನಡೆಸಿದರೂ, ಅಂಗಡಿಯಲ್ಲಿದ್ದ ಹೆಚ್ಚಿನ ಎಲ್ಲಾ ವಸ್ತುಗಳು ಸಂಪೂರ್ಣವಾಗಿ ನಾಶವಾಗಿವೆ.

ಮಾಲಕ ಸುಧಾಕರ್ ಶೆಟ್ಟಿ ಅವರು, ಈ ಅವಘಡದಲ್ಲಿ 3 ಲಕ್ಷ ನಗದು ಸಹಿತ ಎಲ್ಲಾ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿಸಿದ್ದಾರೆ. ಬೆಂಕಿ ಅವಘಡದ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಸಂದರ್ಭ, ಪೊಲೀಸ್ ಹಾಗೂ ಸಾರ್ವಜನಿಕರು ಸಹಕಾರ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular