ಕಾರ್ಕಳ: ಬಸ್‌ಗೆ ಆಂಬ್ಯುಲೆನ್ಸ್ ಡಿಕ್ಕಿಯಾಗಿ ವಾಹನಗಳೆರಡು ಜಖಂಗೊಂಡ ಘಟನೆ ಜ. 2ರಂದು ಕುಕ್ಕುಂದೂರು ಗ್ರಾಮದಲ್ಲಿ ಸಂಭವಿಸಿದೆ.
ಬಸ್‌ನ್ನು ಚಾಲಕ ಕುಕ್ಕುಂದೂರು ಗ್ರಾಮದ ದುರ್ಗಾ ಹೈಸ್ಕೂಲ್ ಗ್ಯಾರೇಜ್ ನಿಲ್ದಾಣದಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿ ಮುಂದಕ್ಕೆ ತೆರಳುತ್ತಿರುವಾಗ ಅಜೆಕಾರು ಕಡೆಯಿಂದ ಬರುತ್ತಿದ್ದ ಆಂಬ್ಯುಲೆನ್ಸ್ ವಾಹನ ಡಿಕ್ಕಿ ಹೊಡೆದಿದೆ. ನಂತರ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ಇರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದ ಪರಿಣಾಮವಾಗಿ ಬಸ್‌ನ ಬಲಬದಿ ಹಾಗೂ ಎದುರುಗಡೆಯ ಚಾಲಕನ ಬಾಗಿಲು ಹಾಗೂ ಬಂಪರ್ ಜಖಂಗೊಂಡಿದ್ದು, ಆಂಬ್ಯುಲೆನ್ಸ್ ವಾಹನ ಸಂಪೂರ್ಣ ಜಖಂಗೊಂಡಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.