ಅಮೆರಿಕ: ಅಮೆರಿಕದ ಒರೆಗಾನ್ನಲ್ಲಿ ನಡೆದ ಭೀಕರ ಅಪಘಾತದಲ್ಲಿ ಭಾರತದ ಮೂಲದ ಆರು ವರ್ಷದ ಬಾಲಕಿ ಮತ್ತು ತಾಯಿ ಮೃತಪಟ್ಟಿದ್ದಾರೆ.
ಸಿಗ್ನಲ್ ಕಾರು ನಿಲ್ಲಿಸುವಂತೆ ಸೂಚಿಸಿದ್ದರೂ ವೇಗವಾಗಿ ವಾಹನ ಚಲಾಯಿಸಿಕೊಂಡ ಹೋದ ಪರಿಣಾಮ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆ ಪರಿಣಾಮ ತಾಯಿ, ಮಗು ಸಾವನ್ನಪ್ಪಿದ್ದಾರೆ ಎಂದು ಒರೆಗಾನ್ ಸ್ಟೇಟ್ ಪೋಲೀಸರು ತಿಳಿಸಿದ್ದಾರೆ.
ಕ್ಲಾಕಮಾಸ್ ಕೌಂಟಿಯಲ್ಲಿ ಇಬ್ಬರು ಪ್ರಯಾಣಿಕರು ಗಾಯಗೊಂಡಿರುವ ಅಪಘಾತ ಸಂಭವಿಸಿದೆ ಎಂದು ಒರೆಗಾನ್ ಸ್ಟೇಟ್ ಪೋಲೀಸ್ ತಿಳಿಸಿದೆ ಎಂದು ದಿ ಒರೆಗೋನಿಯನ್ ಪತ್ರಿಕೆ ವರದಿ ಮಾಡಿದೆ. ಈ ದುರ್ಘಟನೆಯಲ್ಲಿ ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾರ್ಚ್ 30 ರಂದು ಕ್ಲಾಕಮಾಸ್ ಕೌಂಟಿಯಲ್ಲಿ ಈ ಘಟನೆ ನಡೆದಿದೆ. 32 ವರ್ಷದ ಕಕ್ಕೇರಾ ಗೀತಾಂಜಲಿ ಹಾಗೂ ಇವರ ಮಗು ಸಾವನ್ನಪ್ಪಿದೆ. ಪತಿ ನರೇಶ್ ಬಾಬು ಮತ್ತು ಪುತ್ರ ಗಾಯಗೊಂಡಿದ್ದಾರೆ.
ಅಮೆರಿಕದಲ್ಲಿ ನೆಲಸಿರುವ ಗೀತಾಂಜಲಿ ಮತ್ತು ನರೇಶಬಾಬು ಮೂಲತಃ ಆಂಧ್ರಪ್ರದೇಶದವರು. ಕೊನಕಂಚಿ ಗ್ರಾಮದವರಾಗಿದ್ದು, ಇಬ್ಬರು ಸಾಫ್ಟ್ವೇರ್ ಎಂಜಿನಿಯರ್ಸ್ ಆಗಿದ್ದರು. ಗೀತಾಂಜಲಿ ಅವರ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗೀತಾಂಜಲಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗೀತಾಂಜಲಿ ಹುಟ್ಟುಹಬ್ಬ ಆಗಿತ್ತು. ಹೀಗಾಗಿ ಕುಟುಂಬ ಸಮೇತ ದೇವಸ್ಥಾನಕ್ಕೆ ಹೋಗಿದ್ದರು ಎನ್ನಲಾಗಿದೆ. ಮೃತದೇಹವನ್ನು ತವರಿಗೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.