ಕಾಪು ಹೊಸ ಮಾರಿಗುಡಿ ದೇವಸ್ಥಾನವು ಸಮಗ್ರವಾಗಿ ಜೀರ್ಣೋದ್ಧಾರಗೊಳ್ಳುತ್ತಿದ್ದು, ಇದಕ್ಕಾಗಿ ಬೃಹತ್ ರಾಜಗೋಪುರ ನಿರ್ಮಾಣ ಮಾಡುವುದೆಂದು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯು ನಿರ್ಧರಿಸಿತ್ತು, ಅದರಂತೆ ಮಾರ್ಚ್ 5 ರ ಮಂಗಳವಾರದಂದು ಶಿಲ್ಪಿಗಳಾದ ವಿಷ್ಣುಮೂರ್ತಿ ಭಟ್ ಅವರಿಗೆ ಯೋಜನೆಯ ನೀಲನಕಾಶೆಯ ಪ್ರತಿಯನ್ನು ಅಮ್ಮನ ಸನ್ನಿದಾನದಲ್ಲಿ ನೀಡಲಾಯಿತು. ಎಳ್ಳಿನಷ್ಟು ಕೊರತೆ, ನೂಲಿನಷ್ಟು ಲೋಪದೋಷ ಬಾರದಂತೆ ರಾಜಗೋಪುರದ ಕೆಲಸ ಕಾರ್ಯಗಳು ನಡೆಯುವಂತೆ ಅನುಗ್ರಹಿಸುತ್ತೇನೆ ಎಂಬುದಾಗಿ ಸಾನಿಧ್ಯದಲ್ಲಿ ಅಮ್ಮನ ನುಡಿಯಾಯಿತು. ಈ ಸಂದರ್ಭದಲ್ಲಿ ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ, ರಮೇಶ್ ಹೆಗ್ಡೆ ಕಲ್ಯಾ, ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ದೇವಳದ ಪ್ರಧಾನ ತಂತ್ರಿಗಳಾದ ವಿದ್ವಾನ್ ಕೆ.ಪಿ ಕುಮಾರಗುರು ತಂತ್ರಿ, ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾ, ಕಾಪು ಪುರಸಭಾ ಮುಖ್ಯಧಿಕಾರಿ ಸಂತೋಷ್ ಕುಮಾರ್, ಆರ್ಥಿಕ ಸಮಿತಿಯ ಮುಖ್ಯ ಸಂಚಾಲಕರಾದ ರಮೇಶ್ ಶೆಟ್ಟಿ ಕಾಪು ಕೊಲ್ಯ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಚಂದ್ರಶೇಖರ ಅಮೀನ್, ಜಗದೀಶ್ ಬಂಗೇರ, ರವೀಂದ್ರ ಎಮ್., ಬಾಬು ಮಲ್ಲಾರ್ ಮತ್ತು ಪ್ರಚಾರ ಸಮಿತಿಯ ಸಂಚಾಲಕರಾದ ರಘುರಾಮ್ ಶೆಟ್ಟಿ ಕೊಪ್ಪಲಂಗಡಿ ಉಪಸ್ಥಿತರಿದ್ದರು.