ದಾವಣಗೆರೆ: ದಾಣಗೆರೆಯ ಆದಿ ಕವಿ ಮಹಾಲಿಂಗ ರಂಗರ ಸಂದೇಶದಂತೆ ಸುಲಿದ ಬಾಳೇಹಣ್ಣಿನಂತೆ ಕನ್ನಡ ಭಾಷೆ ಸುಲಲಿತ ನಾಡಿನ ವಿವಿಧ ಭಾಷೆಗಳಲ್ಲಿ ಪ್ರಥಮ ಆದ್ಯತೆ ಕನ್ನಡಕ್ಕೆ ಇರುವುದು ಹೆಮ್ಮೆಯ ಸಂಗತಿ. ಈ ಕನ್ನಡ ನಾಡಿನಲ್ಲಿ ಹುಟ್ಟಿದ ನಾವು ನೀವೆಲ್ಲ ಪುಣ್ಯವಂತರು ಕನ್ನಡ ಸಂಸ್ಕೃತಿ ಇಲಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಶಿಕ್ಷಣ ಇಲಾಖೆಗಳು ಮಾಡದೇ ಇರುವಂತ ಕನ್ನಡ ಕಾಯಕ ಯಾವುದೇ ಸರ್ಕಾರದ ಇಲಾಖೆಯ ಅನುದಾನವಿಲ್ಲದೇ ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಯಶಸ್ವಿಯಾಗಿ, ನಿರಂತರವಗಿ ಮಾಡುತ್ತಿರುವುದು ಶ್ಲಾಘನೀಯ ಎಂದು ದಾವಣಗೆರೆಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಿ. ವಾಮದೇವಪ್ಪ ತಮ್ಮ ಮನದಾಳದ ಮಾತು ಹಂಚಿಕೊಂಡರು.
ದಾವಣಗೆರೆಯ ವಿದ್ಯಾನಗರ ರಸ್ತೆಯಲ್ಲಿರುವ ಕುವೆಂಪು ಕನ್ನಡ ಭವನದ ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ “ಸುವರ್ಣ ಕರ್ನಾಟಕ ಕಣ್ಮಣಿ” ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸುಮಾರು ೧೧೫ ಸಾಧಕರಿಗೆ ವೈಭವಪೂರ್ಣವಾಗಿ ಸ್ವಾಗತಿಸಿ ಕನ್ನಡ ಕಂಕಣ ಕಟ್ಟಿ, ಕನ್ನಡದ ತಿಲಕವಿಟ್ಟು, ಕನ್ನಡಾರತಿ ಬೆಳಗಿ ವಿಶೇಷವಾದ ಸಿಂಹಾಸನದ ಮೇಲೆ ಕೂರಿಸಿ ತಲೆ ಮೇಲೆ ಕನ್ನಡ ಪೇಟವಿಟ್ಟು ಅವರದೇ ಭಾವಚಿತ್ರವಿರುವ ಸನ್ಮಾನ ಪತ್ರದೊಂದಿಗೆ ವಿಜೃಂಭಣೆಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮೈಸೂರಿನ ಖ್ಯಾತ ಸಾಹಿತಿ, ವಾಗ್ಮಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಸಾಧಕರು ಕೇವಲ ಸಾಧನೆಗಷ್ಟೇ ಸೀಮಿತವಾಘದೇ ಸಮಾಜ ಸೇವೆಗಳ ಕಡೆಗೆ ಗಮನಿಸಬೇಕಾಗಿದೆ. ಸನ್ಮಾನಿತರಿಗೆ ಪ್ರಶಸ್ತಿ ಪಡೆದ ನಂತರ ಮುಂದಿನ ಸಾಧನೆಗೆ ಇದು ಅಡಿಪಯ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಲಾಕುಂಚ ಸಂಸ್ಥೆಯ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್ ಮಾತನಾಡಿ, ಸಂಘಟನೆ ಅಷ್ಟು ಸುಲಭದ ಕೆಲಸವಲ್ಲ, ಕೇವಲ ಆರಂಭದ ಶೂರತ್ವಕ್ಕೆ ಸೀಮಿತವಾಗದೇ, ಸಮಯ ಪ್ರಜ್ಞೆ, ಕರ್ತವ್ಯನಿಷ್ಠೆ, ಬದ್ದತೆಯೊಂದಿಗೆ ತೊಡಗಿಸಿಕೊಂಡಾಗ ಸಂಸ್ಥೆಗಳಿಗೆ ಸಾರ್ಥಕತೆ ಬರುತ್ತದೆ. ಈ ನಿಟ್ಟಿನಲ್ಲಿ ಕಲಾಕುಂಚ ಸಂಸ್ಥೆ ಕಳೆದ ೩೫ ವರ್ಷಗಳಿಂದ ನಿರಂತರವಗಿ ಕಠಿಣ ಪರಿಶ್ರಮದಿಂದ ಶಿಸ್ತು ಬದ್ಧವಾಗಿ ನಡೆಸಿಕೊಂಡು ಬಂದಿದ್ದು ಹೆಮ್ಮೆ ಎಂದು ಹೇಳಿ ಪ್ರಶಸ್ತಿ ಪುರಸ್ಕೃತರೆಲ್ಲರಿಗೂ ಅಭಿನಂದನೆಗಳೊಂದಿಗೆ ಶುಭ ಕೋರಿದರು.
ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್‌ಶೆಣೈ, ಗೌರವ ಅಧ್ಯಕ್ಷರಾದ ವಸಂತಿ ಮಂಜುನಾಥ್, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವೇದಿಕೆಯಲ್ಲಿ ಗೌರವ ಉಪಸ್ಥಿತರಿದ್ದರು.
ಮುಕ್ತಾ ಶ್ರೀನಿವಾಸಪ್ರಭುರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಪುಷ್ಪ ಮಂಜುನಾಥ್ ಸ್ವಾಗತಿಸಿದರು. ಡಾ|| ಆರತಿ ಸುಂದರೇಶ್ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು. ಪ್ರಾಸ್ತಾವನೆಯಾಗಿ ಮಾತನಾಡಿ, ಶೈಲಾ ವಿನೋದ ದೇವರಾಜ್ ಅತಿಥಿಗಳ ಪರಿಚಯ ವ್ಯಕ್ತಪಡಿಸಿದರು. ಕೊನೆಯಲ್ಲಿ ಕಲಾಕುಂಚ ಚಿತ್ರದುರ್ಗ ಪ್ರತಿನಿಧಿ ಶೋಭಾ ಮಂಜುನಾಥ ವಂದಿಸಿದರು.