Saturday, February 15, 2025
HomeUncategorizedತುಳು ಅಧ್ಯಯನಕ್ಕೆ ವಿಪುಲ ಅವಕಾಶ: ಧನಂಜಯ ಮೂಡುಬಿದಿರೆ   

ತುಳು ಅಧ್ಯಯನಕ್ಕೆ ವಿಪುಲ ಅವಕಾಶ: ಧನಂಜಯ ಮೂಡುಬಿದಿರೆ   

ಮೂಡುಬಿದಿರೆ: ತುಳುವಿನ ಬಗ್ಗೆ ಹಿಂಜರಿಕೆಯ ಕಾಲವೊಂದಿತ್ತು. ಇಂದು ತುಳುವಿನ ಬಗ್ಗೆ ಗೌರವ ಪ್ರಾಪ್ತವಾದ ಕಾಲ. ಅಪೂರ್ವ ದಾಖಲೀಕರಣಕ್ಕೆ ಸೂಕ್ಷ್ಮ ಅಧ್ಯಯನಕ್ಕೆ ವಿಪುಲ ಅವಕಾಶವಿದೆ” ಎಂದು ಹಿರಿಯ ಪತ್ರಕರ್ತ ಧನಂಜಯ ಮೂಡುಬಿದಿರೆ ನುಡಿದರು.  

ಅವರು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ವತಿಯಿಂದ ನಡೆದ ತುಳು ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 ತುಳುವಿನಲ್ಲಿ ಬಹು ಭಾಷಿಕ ವೈವಿಧ್ಯ ಮತ್ತು ಸಾಂಸ್ಕೃತಿಕ ವೈವಿಧ್ಯವನ್ನು ಕುತೂಹಲ ಮತ್ತು ಗೌರವದಿಂದ ನೋಡುವ ಮನೋಭಾವ ಲೇಖಕನಿಗೆ ಅಗತ್ಯ ಎಂದವರು ಹೇಳಿದರು.

ನಿನಗೇನು ಭಾಷೆ ಇಲ್ಲವಾ? ಎಂಬ ಮಾತಿನಲ್ಲೇ ಭಾಷೆ ಮತ್ತು ಸಂಸ್ಕೃತಿ ಪರಸ್ಪರ ಹಾಸುಹೊಕ್ಕಾದ ವಿಷಯಗಳು ಎಂಬುದು ಸ್ಪಷ್ಟ ಎಂದವರು ಹೇಳಿದರು.  ಸಂಯೋಜಕ ಡಾ. ಯೋಗೀಶ ಕೈರೋಡಿ ಪ್ರಸ್ತಾವನೆಗೈದರು.

 ವಿದ್ಯಾರ್ಥಿಗಳಾದ ಹೃಷಿಕೇಶ್ (ನಾಗ ಬನ),  ತೇಜಸ್ ಡಿ. ಪೂಜಾರಿ.(ಅಜಿಲ ಸೀಮೆ),ಅರ್ಚನಾ ಜೆ. ಪೂಜಾರಿ ( ಕೊರಗ ತನಿಯ), ಸಂಚನಾ (ಆರಾಧನಾ ಸಂಸ್ಕೃತಿ), ಶ್ರೇಯಸ್ ಶೆಟ್ಟಿ ( ಕೋಟಿ ಚೆನ್ನಯ), ಪ್ರಿಥ್ವಿಜಾ (ಅವಳಿ ಆರಾಧನೆ), ಅನೂಷ (ತುಳುನಾಡ ಆಚರಣೆ) ತುಳುವಿನಲ್ಲಿ ವಿವಿಧ ವಿಚಾರಗಳನ್ನು ಮಂಡಿಸಿದರು. 

 ಪ್ರಾಂಶುಪಾಲ ಡಾ. ಕುರಿಯನ್, ಉಪನ್ಯಾಸಕರಾದ ಡಾ.ಜ್ಯೋತಿ ರೈ, ಹರೀಶ್ ಟಿ‌.ಜಿ ಉಪಸ್ಥಿತರಿಸ್ದರು. ಶ್ರೇಯಾಂಕ ಸ್ವಾಗತಿಸಿ, ಕೌಶಿಕ್ ವಂದಿಸಿದರು. ಪ್ರಣಮ್ಯ ನಿರೂಪಿಸಿದರು.

RELATED ARTICLES
- Advertisment -
Google search engine

Most Popular