ಮೂಡಬಿದಿರೆ : ಮೂಡಬಿದಿರೆ ಬ್ರಹ್ಮ ಶ್ರೀ ಗುರು ನಾರಾಯಣ ಸಂಘದ ಗುರು ಮಂದಿರದಲ್ಲಿ, ಸಂಘದ ಅಮೃತ ಮಹೋತ್ಸವದ ಅಂಗವಾಗಿ ಅಮೃತ ವಿದ್ಯಾನಿಧಿ ಅದೃಷ್ಟ ಚೀಟಿಯನ್ನು, ಅಮೃತ ಮಹೋತ್ಸವದ ಸಂಚಾಲಕರದ ಶ್ರೀ ಪ್ರಕಾಶ್ ಪೂಜಾರಿ ಹಾಗೂ,ಸಂಘದ ಅಧ್ಯಕ್ಷರಾದ ಸುರೇಶ್ ಕೆ ಪೂಜಾರಿಯವರು ಬಿಡುಗಡೆ ಮಾಡಿದರು. ಸಂಘದ ಉಪಾಧ್ಯಕ್ಷರಾದ ರವೀಂದ್ರ ಕರ್ಕೇರ, ಸುಶಾಂತ್ ಕರ್ಕೇರ, ಕಾರ್ಯದರ್ಶಿ ಗಿರೀಶ್ ಕುಮಾರ್ ಹಂಡೇಲು, ಹಿರಿಯರಾದ ನಾರಾಯಣ ಕೋಟ್ಯಾನ್, ಜೊತೆ ಕಾರ್ಯದರ್ಶಿ ವಸಂತ ಸುವರ್ಣ, ಸದಸ್ಯರಾದ ನವೀನ್ ಕುಂದರ್, ಸೇವಾದಳ ಮತ್ತು ಮಹಿಳಾ ಘಟಕದ ಸಂಚಾಲಕರಾದ ಭವಿಷ್ಯತ್ ಕೋಟ್ಯಾನ್,ಸೇವಾದಾಳದ ಅಧ್ಯಕ್ಷರಾದ ದಿನೇಶ್ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷರಾದ ಸವಿತಾ ದಿನೇಶ್ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು, ಸೇವಾದಳದ ಸದಸ್ಯರು ಪದಾಧಿಕಾರಿಗಳು, ಮಹಿಳಾ ಘಟಕದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.
ಅಮೃತ ಮಹೋತ್ಸವ ಅಂಗವಾಗಿ ಮೂಡಬಿದಿರೆ ಬ್ರಹ್ಮ ಶ್ರೀ ಗುರು ನಾರಾಯಣ ಸಂಘದಲ್ಲಿ ಅಮೃತ ವಿದ್ಯಾನಿಧಿ ಅದೃಷ್ಟ ಚೀಟಿಯ ಬಿಡುಗಡೆ
RELATED ARTICLES