ವರದಿ ರಾಯಿ ರಾಜ ಕುಮಾರ
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಮಾಳ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮ ಡಿಸೆಂಬರ್ 26 ರಿಂದ 28ರ ತನಕ ನಡೆಯಲಿದೆ . ಶ್ರೀ ಗುರುಕುಲ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಈ ಸಂಸ್ಥೆಗೆ ಎರಡು ರಾಷ್ಟ್ರ ಪ್ರಶಸ್ತಿ ಪುರಸ್ಕಾರಗಳು ಲಭಿಸಿದೆ . ಪಠ್ಯ ಚಟುವಟಿಕೆಯೊಂದಿಗೆ ಯೋಗ , ಭಗವದ್ಗೀತೆ , ಅಬಾಕಸ್ , ವೇದಗಣಿತ , ಚಿತ್ರಕಲೆ , ಇತ್ಯಾದಿ ಕಲಿಸಲ್ಪಡುತ್ತಿದೆ . ಕಳೆದ ಎಂಟು ವರ್ಷಗಳಿಂದ ಅನುದಾನಿತ ಶಿಕ್ಷಕರಿಲ್ಲದೆಯೂ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ . ಕಳೆದ 20 ವರ್ಷಗಳಲ್ಲಿ ರಂಗಮಂದಿರ , ತರಗತಿ ಕೊಠಡಿಗಳು , ಶೌಚಾಲಯ , ಮಾತೃಛಾಯಾ ಪ್ರಾಂಗಣ , ಸರಸ್ವತಿ ಮಂದಿರದ ರಚನೆ ವಿದ್ಯಾಭಿಮಾನಿಗಳು , ಹಳೆ ವಿದ್ಯಾರ್ಥಿಗಳ ಕೊಡುಗೆಯಿಂದ ಸಾಧ್ಯವಾಗಿದೆ . ಎರಡು ಕೋಟಿಯ ಅಮೃತ ಶಾಶ್ವತ ಯೋಜನೆಯನ್ನು ಸಮಿತಿ ಹೊಂದಿದೆ .
ಡಿಸೆಂಬರ 26ರಂದು ವಾಸ್ತು ಪೂಜೆ , ಗಣ ಹೋಮ, ನೂತನ ತರಗತಿ ಕೋಣೆ , ಸಭಾಭವನ , ಪ್ರವೇಶ ದ್ವಾರ ಉದ್ಘಾಟನೆ , ಧ್ವಜಾರೋಹಣ , ದೀಪ ಪ್ರಜ್ವಲನ, ಸಭಾ ಕಾರ್ಯಕ್ರಮ , ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ .
ಡಿಸೆಂಬರ್ 27 ರಂದು ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಸಂರಕ್ಷಣೆ ಮತ್ತು ಸಂವರ್ಧನೆ ವಿಷಯದಲ್ಲಿ ಸಂವಾದ ಹಾಗೂ ಸಭಾ ಕಾರ್ಯಕ್ರಮ . ಸಂಜೆ ಸಾಂಸ್ಕೃತಿಕ ವೈವಿಧ್ಯ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ .
ಡಿಸೆಂಬರ್ 28ರಂದು ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ , ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ , ಸಂಗೀತ ರಸಮಂಜರಿ ಜರುಗಲಿದೆ . 22 ಸಮಿತಿಗಳನ್ನು ರಚಿಸಲಾಗಿದ್ದು ನಾಗಭೂಷಣ ಜೋಶಿ ಗೌರವಾಧ್ಯಕ್ಷ , ಪ್ರಭಾಕರ ಜೋಶಿ ಪ್ರಧಾನ ಅಧ್ಯಕ್ಷ , ಸುಮನಾ ಘಾಟೆ ಉಪಾಧ್ಯಕ್ಷ , ಗಜಾನನ ಮರಾಠೆ ಕಾರ್ಯಧ್ಯಕ್ಷ , ಸುಧಾಕರ ಡೊಂಗ್ರೆ ಸಂಚಾಲಕ , ರಾಮ ಶೇರೆಗಾರ್ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ .
.

