ಉಪ್ಪಿನಂಗಡಿ: ಸೈಕಲ್ ರಿಪೇರಿ ಮಾಡಿಕೊಟ್ಟಿಲ್ಲವೆಂದು ಇಲ್ಲಿನ ಕರಾಯ ಗ್ರಾಮದ ಶಿವಗಿರಿಯ ಬಾಲಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕರಾಯದ ಶಿವಗಿರಿಯ 13 ವರ್ಷದ ನಂದನ್ ಆತ್ಮಹತ್ಯೆ ಮಾಡಿಕೊಂಡ ಬಾಲಕ. ತನ್ನ ಸ್ನೇಹಿತರ ಜೊತೆಗೆ ಆಟವಾಡುವಾಗ ಸೈಕಲ್ ಸರಿಯಿಲ್ಲ, ರಿಪೇರಿ ಮಾಡಿಕೊಡುವಂತೆ ಮನೆಯವರಲ್ಲಿ ನಂದನ್ ಕೇಳಿದ್ದ. ಆದರೆ ಮನೆಯವರು ನಾಳೆ ರಿಪೇರಿ ಮಾಡಿಕೊಡುತ್ತೇವೆ ಎಂದಿದ್ದರು. ಇದರಿಂದ ಮನನೊಂದ ಬಾಲಕ ಚಿಲಕ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಉಪ್ಪಿನಂಗಡಿಯ ಖಾಸಗಿ ಶಾಲೆಯೊಂದರ ವಿದ್ಯಾರ್ಥಿಯಾಗಿದ್ದ ನಂದನ್ ಪ್ರತಿಭಾವಂತನಾಗಿದ್ದು, 8ನೇ ತರಗತಿ ಉತ್ತೀರ್ಣನಾಗಿದ್ದ.