Saturday, June 14, 2025
Homeರಾಜಕೀಯಪ್ರಧಾನಿ ಮೋದಿಗೆ ಮರಳು ಕಲಾಕೃತಿ ರಚಿಸಿ ಶುಭ ಕೋರಿದ ಕಲಾವಿದ

ಪ್ರಧಾನಿ ಮೋದಿಗೆ ಮರಳು ಕಲಾಕೃತಿ ರಚಿಸಿ ಶುಭ ಕೋರಿದ ಕಲಾವಿದ

ಪುರಿ: ಮರಳು ಶಿಲ್ಪಿ ಸುದರ್ಶನ್‌ ಪಟ್ನಾಯಕ್‌ ಅವರು ಪುರಿಯ ಕಡಲ ಕಿನಾರೆಯಲ್ಲಿ ಮರಳಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಲಾಕೃತಿಯನ್ನು ರಚಿಸುವ ಮೂಲಕ ಮತ್ತೊಮ್ಮೆ ದೇಶದ ಪ್ರಧಾನಿಯಾಗುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಸುದರ್ಶನ್‌ ಪಟ್ನಾಯಕ್‌ ಅವರು ಈಚೆಗೆ ಪುರಿಯ ಕಡಲ ಕಿನಾರೆಯಲ್ಲಿ 500 ಕೆ.ಜಿ ಮಾವಿನ ಹಣ್ಣುಗಳನ್ನು ಬಳಸಿ ಕಲಾಕೃತಿಯನ್ನು ರಚಿಸುವ ಮೂಲಕ ಮತದಾನದ ಜಾಗೃತಿ ಮೂಡಿಸಿದ್ದು, ಮತದಾರರು ತಪ್ಪದೆ ತಮ್ಮ ಹಕ್ಕು ಚಲಾಯಿಸುವಂತೆ ಮನವಿ ಮಾಡಿದ್ದರು.

2,000 ಚದರ ಅಡಿ ಪ್ರದೇಶದಲ್ಲಿ ರಚಿಸಿದ್ದ ಕಲಾಕೃತಿ ಮೇಲೆ ‘ಚುನಾವ್ ಕಾ ಪರ್ವ್ ದೇಶ್ ಕಾ ಗರ್ವ್’ ಮತ್ತು ‘ನಿಮ್ಮ ಮತ ನಿಮ್ಮ ಧ್ವನಿ’ ಎಂದು ಬರೆದಿದ್ದರು.

ಲೋಕಸಭೆಗೆ ಏಪ್ರಿಲ್ 19ರಿಂದ ಜೂನ್ 1ರವರೆಗೆ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆದಿತ್ತು. ಜೂನ್‌ 4 (ಮಂಗಳವಾರ) ಫಲಿತಾಂಶ ಹೊರಬಿದ್ದಿದೆ. 543 ಲೋಕಸಭಾ ಸೀಟುಗಳ ಪೈಕಿ 291ರಲ್ಲಿ ಬಿಜೆಪಿ ನೇತೃತ್ವದ ‘ಎನ್‌ಡಿಎ’ ಮೈತ್ರಿಕೂಟ ಗೆಲುವು ಸಾಧಿಸಿದ್ದು, ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗುವುದು ಬಹುತೇಕ ಖಚಿತವಾಗಿದೆ.

RELATED ARTICLES
- Advertisment -
Google search engine

Most Popular