Sunday, July 14, 2024
Homeಅಪರಾಧಸಂಬಳ ಕೊಟ್ಟಿಲ್ಲ ಎಂದು ಬಾಂಬ್ ಬೆದರಿಕೆ ಹಾಕಿದ ನೌಕರ ಅರೆಸ್ಟ್

ಸಂಬಳ ಕೊಟ್ಟಿಲ್ಲ ಎಂದು ಬಾಂಬ್ ಬೆದರಿಕೆ ಹಾಕಿದ ನೌಕರ ಅರೆಸ್ಟ್

ಬೆಂಗಳೂರು : ಸಂಬಳ ಕೊಟ್ಟಿಲ್ಲ ಎಂದು ರೆಸ್ಟೋರೆಂಟ್ ಗೆ ಹುಸಿ ಬಾಂಬ್ ಕರೆದ ಮಾಡಿದ ನೌಕರ ಪೊಲೀಸರ ಅತಿಥಿಯಾಗಿದ್ದಾರೆ. ವೇಲು ಎಂಬಾತ ಮಹದೇವಪುರ ಠಾಣಾ ವ್ಯಾಪ್ತಿಯ ಪಾಸ್ತಾ ಸ್ಟ್ರೀಟ್ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದನು. ಸಂಬಳ ಕೊಟ್ಟಿಲ್ಲ ಎಂದು ರೆಸ್ಟೋರೆಂಟ್ ಗೆ ಹುಸಿ ಬಾಂಬ್ ಕರೆ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ.ಸ್ಯಾಲರಿ ಕೊಟ್ಟಿಲ್ಲ ಎಂದು ಕುಡಿದು ರೆಸ್ಟೋರೆಂಟ್ ಮಾಲೀಕರಿಗೆ ಕೆಲಸಗಾರನೇ ಬಾಂಬ್ ಇಟ್ಟಿರೋದಾಗಿ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ.

ಮಹದೇವಪುರ ಠಾಣಾ ವ್ಯಾಪ್ತಿಯ ಪಾಸ್ತಾ ಸ್ಟ್ರೀಟ್ ರೆಸ್ಟೋರೆಂಟ್ ಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಕರೆ ಮಾಡಿದ್ದ ವ್ಯಕ್ತಿ ಶೀಘ್ರವೇ ಬಾಂಬ್ ಬ್ಲಾಸ್ಟ್ ಆಗುತ್ತೆ ಎಂದು ಹೇಳಿ ಫೋನ್ ಕಟ್ ಮಾಡಿದ್ದನು. ನಂತರ ಸುದ್ದಿ ತಿಳಿದ ಪೊಲೀಸರು ರೆಸ್ಟೋರೆಂಟ್ ಗೆ ಬಂದು ತಪಾಸಣೆ ನಡೆಸಿದ್ದಾರೆ. ರೆಸ್ಟೋರೆಂಟ್ ಪರಿಶೀಲನೆ ನಡೆಸಿ ಕೊನೆಗೆ ಹುಸಿ ಬೆದರಿಕೆ ಕರೆ ಎಂದು ಖಚಿತಪಡಿಸಿಕೊಂಡಿದ್ದರು. ನಂತರ ವಿಚಾರಣೆ ನಡೆಸಿ ವೇಲು ಎಂಬಾತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ, ತನಿಖೆ ಬಳಿಕ ಅಸಲಿ ಸತ್ಯ ಬಯಲಾಗಿದೆ.

RELATED ARTICLES
- Advertisment -
Google search engine

Most Popular