ಸುರತ್ಕಲ್ : ಪೆಟ್ರೋಲಿಯಂ ಗ್ಯಾಸ್ ವರ್ಕರ್ಸ್ ಫೆಡರೇಶನ್ ಅಪ್ ಇಂಡಿಯಾ ಯೂನಿಯನ್ ನ ರಾಷ್ಟ್ರೀಯ ನಾಯಕರು ಬಾಳ ಸಮುದಾಯಭವನದಲ್ಲಿ ಎಂ,ಅರ್,ಪಿ,ಎಲ್ ಒ.ಎನ್.ಜಿ.ಸಿ ಕರ್ಮಚಾರಿ ಸಂಘದ ಜೊತೆ ಮಹತ್ವದ ಸಭೆ ನಡೆಸಿದರು ಕಾರ್ಮಿಕರು ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಬಗ್ಗೆ ಮತ್ತು ಮಾಸಿಕ 21000 ವೇತನಕ್ಕಿಂತ ಜಾಸ್ತಿ ಯಿದ್ದರೆ ಇ.ಎಸ್,ಐ ಸೌಲಭ್ಯಗಳು ಪ್ರಸ್ತುತ ಇಲ್ಲ ಅದನ್ನು ಮಾಸಿಕ 35000 ವರೆಗೆ ಏರಿಸಿ ಇ.ಎಸ್.ಐ ಸೌಲಭ್ಯ ಕಲ್ಪಿಸಬೇಕು ಎಂಬ ಮನವಿಯನ್ನು ಕರ್ಮಚಾರಿ ಸಂಘದ ವತಿಯಿಂದ ನೀಡಲಾಯಿತು ಇದಕ್ಕೆ ಉತ್ತರಿಸಿದ ನಾಯಕರು ಈ ಬಗ್ಗೆ ಮುಂದಿನ ತಿಂಗಳಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಕಾನೂನು ತಿದ್ದುಪಡಿ ಮಾಡುವರೇ ಸಂಬಂಧಿಸಿದ ಸಚಿವರನ್ನು ಬೇಟಿ ಮಾಡಲಾಗುವುದು ಎಂದರು ಪೆಟ್ರೋಲಿಯಂ ಗ್ಯಾಸ್ ವರ್ಕರ್ಸ್ ಫೆಡರೇಶನ್ ಅಪ್ ಇಂಡಿಯಾ ಯೂನಿಯನ್ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ್ ಮಾಯೆಕರ್,ಸ್ಥಾಪಕ ಅಧ್ಯಕ್ಷ ಸ್ವದೇಶ್ ದೆಬ್ರಾಯ್,ಪ್ರಧಾನ ಕಾರ್ಯದರ್ಶಿ ನೊಗೇನ್ ಚುತಿಯಾ, ಎಂ,ಅರ್,ಪಿ,ಎಲ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಮುಕೇಶ್,ಕರ್ಮಚಾರಿ ಸಂಘದ ಅಧ್ಯಕ್ಷ ನಿತಿನ್ ಬಿಸಿರೋಡು,ಉಪಾಧ್ಯಕ್ಷ ಪ್ರಸಾದ್ ಅಂಚನ್,ಸುರೇಶ್ ಪೊಸ್ರಾಲ್,ಪ್ರಧಾನ ಕಾರ್ಯದರ್ಶಿ ಸುರೇಂದ್ರ ಭಟ್,ಜತೆ ಕಾರ್ಯದರ್ಶಿ ಸುನೀಲ್ ಬೋಳ,ಸುರೇಶ್ ಪೂಜಾರಿ,ಕೋಶಾಧಿಕಾರಿ ಪುರುಷೋತ್ತಮ, ಎಸ್ ಸಿ ಎಸ್ ಟಿ ವಿಭಾಗದ ಅಧ್ಯಕ್ಷ ಸಂತೋಷ್ ಮುಂಡ್ಕೂರು ಮುಂತಾದವರು ಉಪಸ್ಥಿತರಿದ್ದರು