ಶ್ರೀ ಶ್ರೀ ರವಿ ಶಂಕರ್ ಗುರೂಜಿ ಯವರ “ಜೀವನ ಕಲೆ ಪ್ರತಿಷ್ಠಾನ” ಸಂಸ್ಥೆ ( ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ) ಬೆಂಗಳೂರು ಇವರ ವತಿಯಿಂದ ‘ಅನಂದೋತ್ಸವ ಶಿಬಿರ’ ಎಂಬ ಯೋಗ ಮತ್ತು ಪ್ರಾಣಾಯಾಮ ಶಿಬಿರ ಇದೇ ಮೇ 15ರಿಂದ 20 ರ ವರೆಗೆ ಸಂಜೆ 5.30 ರಿಂದ 8 ರ ವರೆಗೆ ‘ಅರಿಪ್ಪಾಡಿ ಮಠ ಸಭಾಂಗಣ ಉಜಿರೆ ‘ ಇಲ್ಲಿ ಏರ್ಪಡಿಸಲಾಗಿದೆ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆ ತಿಳಿಸಿದೆ.
ಈ ಕಾರ್ಯಕ್ರಮವು ಸುದರ್ಶನ ಕ್ರಿಯೆ ಎಂಬ ಒಂದು ಲಯಬದ್ದ ಉಸಿರಾಟದ ಕಾರ್ಯಕ್ರಮವಾಗಿದ್ದು, ದೇಹದ ಅರೋಗ್ಯ ವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ. ಪ್ರಪಂಚದ ಎಲ್ಲ ಕಡೆ ಮೂರುವರೆ ಕೋಟಿಗೂ ಹೆಚ್ಚು ಜನರು ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಪ್ರಯೋಜನ ಪಡೆದಿದ್ದಾರೆ. 180 ಕ್ಕೂ ಹೆಚ್ಚು ದೇಶಗಲ್ಲಿ ಜೀವನ ಕಲೆ ಪ್ರತೀಷ್ಠಾನ ಜನಪ್ರಿಯತೆ ಯನ್ನು ಗಳಿಸಿದೆ. ಅಮೆರಿಕಲ್ಲಿ ನೂರಕ್ಕೂ ಹೆಚ್ಚು ವಿಶ್ವ ವಿದ್ಯಾಲಯ ಗಳಲ್ಲಿ ಇದನ್ನು ಪಠ್ಯ ಕ್ರಮವಾಗಿ ಅಳವಡಿಸಲಾಗಿದೆ. ಯುರೋಪ್ ಮತ್ತು ಆಫ್ರಿಕಾ ದೇಶಗಳಲ್ಲಿ ಜನರ ಒತ್ತಡ ಭರಿತ ಜೀವನ ಕ್ರಮವನ್ನು ಬದಲಾಯಿಸಿ ಪ್ರಶಾಂತ ಮನಸ್ಸನ್ನು ಕಂಡುಕೊಳ್ಳಲು ನೇರವಾಗಿದೆ. ಜನರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆಯು ಆಶಯ ವ್ಯಕ್ತ ಪಡಿಸಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ :9743642012