Wednesday, January 15, 2025
Homeಬೆಂಗಳೂರುಆಂಧ್ರ ಕ್ರಿಕೆಟಿಗನಿಗೆ ಸ್ಪಾನ್ಸರ್‌ಶಿಪ್‌ ಹೆಸರಿನಲ್ಲಿ ವಂಚನೆ: ಪ್ರಕರಣ ದಾಖಲು

ಆಂಧ್ರ ಕ್ರಿಕೆಟಿಗನಿಗೆ ಸ್ಪಾನ್ಸರ್‌ಶಿಪ್‌ ಹೆಸರಿನಲ್ಲಿ ವಂಚನೆ: ಪ್ರಕರಣ ದಾಖಲು

ಬೆಂಗಳೂರು: ಕ್ರಿಕೆಟ್ ಸ್ಪಾನ್ಸರ್‌ಶಿಪ್‌ ಹೆಸರಿನಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿಯೊಬ್ಬರ ಆಪ್ತ ಸಹಾಯಕನ ಸೋಗಿನಲ್ಲಿ ಕರೆ ಮಾಡಿ ವಂಚಿಸಿದ ಆರೋಪದಡಿ ಅಪರಿಚಿತ ವ್ಯಕ್ತಿ ವಿರುದ್ಧ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ವರದಿಯಾಗಿದೆ.

ಬನಶಂಕರಿ 2ನೇ ಹಂತದಲ್ಲಿರುವ ಸಂಗೀತಾ ಮೊಬೈಲ್ಸ್ ಶೋರೂಮ್ ಮಾಲಕ ರಾಜೇಶ್ ಕೆ.ಬಿ ನೀಡಿರುವ ದೂರಿನ ಅನ್ವಯ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ʻ2022ರ ಮೇ ತಿಂಗಳಿನಲ್ಲಿ‌ ತಮಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ, “ತಾನು ಕೆ.ನಾಗೇಶ್ವರ ರೆಡ್ಡಿ, ಎಂದು ಪರಿಚಯಿಸಿಕೊಂಡಿದ್ದ. ಬಳಿಕ ಆಂಧ್ರಪ್ರದೇಶ ಕ್ರಿಕೆಟ್ ಸಂಸ್ಥೆಯಿಂದ ಕ್ರಿಕೆಟ್ ಆಡುತ್ತಿರುವ ಕ್ರಿಕೆಟಿಗ ರಿಕ್ಕಿ ಭುಯಿಗೆ ಸ್ಪಾನ್ಸರ್‌ಶಿಪ್‌ ಅಗತ್ಯವಿದ್ದು, ನೀವು 2 ಕ್ರಿಕೆಟ್ ಕಿಟ್‌ನ ಮೌಲ್ಯ 10.40 ಲಕ್ಷ ರೂ. ಭರಿಸಿಕೊಡಬೇಕು” ಎಂದಿದ್ದ. ಆತನ ಮಾತು ನಂಬಿ, ಮರುದಿನವೇ 2 ಕಂತಿನಲ್ಲಿ 10.40 ಲಕ್ಷ ರವಾನಿಸಿದ್ದೆ. ಆ ನಂತರ ಇನ್​ ವಾಯ್ಸ್​ ಕೊಡುವಂತೆ ಕೇಳಿದಾಗ ಒಂದಲ್ಲ ಒಂದು ಕಾರಣ ನೀಡುತ್ತಾ ಬಂದಿದ್ದ. ಕೊನೆಗೆ ಫೋನ್ ಕರೆಗಳನ್ನು ಸ್ವೀಕರಿಸದೇ ಇದ್ದಾಗ ಅನುಮಾನಗೊಂಡು ಪರಿಶೀಲಿಸಿದಾಗ, ಕೆ.ನಾಗೇಶ್ವರ ರೆಡ್ಡಿ ಮಾಜಿ ಮುಖ್ಯಮಂತ್ರಿ ಅವರ ಹೆಸರನ್ನು ಬಳಸಿಕೊಂಡು ವಂಚಿಸಿರುವುದು ಗೊತ್ತಾಗಿದೆ” ಎಂದು ರಾಜೇಶ್ ಕೆ.ಬಿ ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಸಂಬಂಧ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಫೋನ್ ಕರೆ ಬಂದ ನಂಬರ್ ಹಾಗೂ ಹಣ ವರ್ಗಾವಣೆಯಾದ ಖಾತೆಯ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular