ಅಮರಾವತಿ:ಈ ಲೋಕಸಭಾ ಚುನಾವಣೆಯಲ್ಲಿ ಇಲ್ಲಿವರೆಗೆ ನಾಮಪತ್ರ ಸಲ್ಲಿಸಿರುವವರಲ್ಲಿ ಆಂಧ್ರ ಪ್ರದೇಶದ ಗುಂಟೂರು ಲೋಕಸಭಾ ಕ್ಷೇತ್ರದ ಟಿಡಿಪಿ ಅಭ್ಯರ್ಥಿ ಡಾ. ಪೆಮ್ಮಸಾನಿ ಚಂದ್ರಶೇಖರ್ ಅತ್ಯಂತ ಶ್ರೀಮಂತರು. ಅನಿವಾಸಿ ಭಾರತೀಯರಾಗಿದ್ದ ಇವರು ಒಟ್ಟು ರೂ. 5,785 ಕೋಟಿ ಮೌಲ್ಯದ ಆಸ್ತಿಯ ಒಡೆಯರು. ಚಂದ್ರಶೇಖರ್ ಅವರು 2,316 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅವರ ಪತ್ನಿ ಕೊನೇರು ಶ್ರೀರತ್ನ ಅವರ ಹೆಸರಿನಲ್ಲಿ 2,289 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ. ಚಂದ್ರಶೇಖರ್ ಬಳಿ 72 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯಿದೆ. ಅವರ ಪತ್ನಿ ಬಳಿ 34 ಕೋಟಿ ರೂ. ಮೌಲ್ಯದ ಸ್ಥಿರಾಸ್ಥಿಯಿದೆ. ವಿಶ್ವದಾದ್ಯಂತ 101 ಕಂಪೆನಿಗಳಲ್ಲಿ ಈ ದಂಪತಿ ಜಂಟಿ ಷೇರುಗಳನ್ನು ಹೊಂದಿದ್ದಾರೆ.