ಬೆಳ್ತಂಗಡಿ: ಶಿರ್ಲಾಲಿನ ಬದ್ಯಾರು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಜನವರಿ 29ರಿಂದ ಫೆಬ್ರವರಿ 2ರವರೆಗೆ ಜಾತ್ರಾ ಮಹೋತ್ಸವ ಜರುಗಲಿದ್ದು, ಫೆ. 2ರಂದು ʻಆನಿದ ಮನದಾನಿದʼ ಎಂಬ ಕುತೂಹಲ ಭರಿತ ಸಾಮಾಜಿಕ ತುಳು ಹಾಸ್ಯಮಯ ನಾಟಕ ನಡೆಯಲಿದೆ.
ರಾಜ್ಯ ಪ್ರಶಸ್ತಿ ವಿಜೇತ ತಂಡ ಶ್ರೀ ಕೃಷ್ಣ ಕಲಾವಿದರು ಉಡುಪಿ ಇವರು ಅಭಿನಯಿಸಿರುವ ಕೆ.ಕೃಷ್ಣಮೂರ್ತಿ ಕಿನ್ನಿಮುಲ್ಕಿ ಉಡುಪಿ, ಸಾರಥ್ಯದ ʻಆನಿದ ಮನದಾನಿದʼ ನಾಟಕ ಸುರೇಶ್ ಶೆಟ್ಟಿ ಪಾಡಿಗಾರ್ ಅವರು ರಚಿಸಿ, ಸಂಗೀತ ಹಾಗೂ ನಿರ್ದೇಶನ ನೀಡಿದ್ದಾರೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಪ್ರಕಟಣೆ ತಿಳಿಸಿದೆ.