“ಇದು ಕೇವಲ ನಾಟಕವಲ್ಲ ಇದೊಂದು ಅದ್ಬುತ ದೃಶ್ಯಕಾವ್ಯ”
ಹೌದು ನನಗೆ ಹೀಗೆ ಅನಿಸಿದ್ದು ಇತ್ತೀಚಿಗೆ ಮೂಡಬಿದ್ರಿಯ “ಕನ್ನಡ ಭವನ”ದಲ್ಲಿ ನಡೆದ “ಶ್ರೀ ಕೃಷ್ಣ ಕಲಾವಿದರು ಉಡುಪಿ” ಇವರು ಅಭಿನಯಿಸಿದ “ಆನಿದ ಮನದಾನಿ” ನಾಟಕ ನೋಡಿದ ಮೇಲೆ
ಒಂದು ಕಥೆಯನ್ನು ರಂಗದ ಮೇಲೆ ಹೀಗೂ ನಿರೂಪಿಸಬಹುದು ಅಂತ ತೋರಿಸಿಕೊಟ್ಟ ಅದ್ಭುತ ಕಥಾನಕ ಇಂತಹ ಪ್ರಯೋಗವನ್ನು ಮಾಡುವುದು ಅಷ್ಟೊಂದು ಸುಲಭದ ಮಾತಲ್ಲ ಅದು ಕಷ್ಟ ಸಾಧ್ಯ ಆ ಕಷ್ಟವನ್ನು ಸುಲಭವಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ ನಾಟಕದ ರಚನೆಕಾರ ನಿರ್ದೇಶಕರಾದ “ಸುರೇಶ್ ಶೆಟ್ಟಿ ಪಾಡಿಗಾರ್”
ಈ ನಾಟಕದ ಪ್ರತಿಯೊಂದು ಎಳೆಯಲ್ಲೂ ನಿರ್ದೇಶಕ ಎದ್ದು ಕಾಣುತ್ತಾನೆ ಯಾಕೆಂದರೆ ಇದರಲ್ಲಿ ಅಭಿನಯಿಸಿದ ಅಷ್ಟೂ ಕಲಾವಿದರು ಬಹುತೇಕ ಹೊಸಬರು ಅವರಿಂದ ಕಥೆಗೆ ಪೂರಕವಾದ ಸಮರ್ಥ ಅಭಿನಯವನ್ನು ಹೊರತೆಗೆಯುವಲ್ಲಿ ನಿರ್ದೇಶಕರು ಅಕ್ಷರಶಃ ಗೆದ್ದಿದ್ದಾರೆ ಎಂದರೂ ತಪ್ಪಾಗಲಾರದು ನಾಯಕ ನಾಯಕಿ ಜೊತೆಗೆ ಪೊಲೀಸ್ ಅಧಿಕಾರಿಯ ಪಾತ್ರವಂತೂ ವಾವ್ ಅದ್ಭುತ ( ಕ್ಷಮಿಸಿ ನನಗೆ ಕಲಾವಿದರ ಹೆಸರು ಗೊತ್ತಿಲ್ಲ ) ತಮಗೆ ನೀಡಿದ ಪಾತ್ರವನ್ನು ಎಲ್ಲೂ ಲೋಪ ಬರದ ರೀತಿಯಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಹಾಗೂ ಉಳಿದ ಪಾತ್ರದಾರಿಗಳು ಕೂಡ ತಮ್ಮ ಪಾತ್ರದಲ್ಲಿ ಚೆನ್ನಾಗಿ ನಟಿಸಿದ್ದಾರೆ.
ತಾಂತ್ರಿಕ ವರ್ಗದ ಬಗ್ಗೆ ಹೇಳುವುದಾದರೆ ಸಂಗೀತ ಮತ್ತು ಬೆಳಕಿನ ಸಂಯೋಜನೆ ಈ ನಾಟಕದ ಜೀವಾಳವೆಂದರೂ ತಪ್ಪಾಗಲಾರದು ಪ್ರತಿಯೊಂದು ದೃಶ್ಯದಲ್ಲಿಯೂ ಕೂಡ ಬೆಳಕನ್ನು ಆಡಿಸಿದ ರೀತಿ ಅದ್ಬುತ ಸಂಗೀತವಂತೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ ಕಲಾವಿದರ ಅಭಿನಯ ಹಿನ್ನಲೆ ಸಂಗೀತ ಬೆಳಕಿನ ಸಂಯೋಜನೆ ನಾಟಕದುದ್ದಕ್ಕೂ ಒಂದೇ ರೀತಿಯಲ್ಲಿ ಸಾಗುತ್ತದೆ.
ಇನ್ನು ಹಾಸ್ಯದ ವಿಷಯಕ್ಕೆ ಬಂದರೆ ತಿಳಿಯಾದ ಹಾಸ್ಯ ಪ್ರೇಕ್ಷಕರನ್ನು ಬೋರ್ ಹೊಡೆಸದ ಹಾಗೆ ನಗುವಿನ ಕಚಗುಳಿಯನ್ನು ನೀಡಿದೆ “ಮುರಳಿ” ಎಂಬ ಹಾಸ್ಯ ಪಾತ್ರದಲ್ಲಿ ನಟಿಸಿದ ಕಲಾವಿದ ಎರಡು ಭಿನ್ನ ಪಾತ್ರಗಳಲ್ಲಿ ತುಂಬಾನೇ ಚೆನ್ನಾಗಿ ಅಭಿನಯಿಸಿದ್ದಾರೆ ಹಾಸ್ಯದ ಕೊನೆಯಲ್ಲಿ “ಪುನೀತ್ ರಾಜಕುಮಾರ್”ರವರ ಬಗ್ಗೆ ನೀಡಿದ ಸಂದೇಶ ಸ್ವಲ್ಪ ಬಾವುಕರನ್ನಾಗಿಸಿತು.
ಒಟ್ಟಾರೆಯಾಗಿ ಹೇಳುವುದಾದರೆ “ಆನಿದ ಮನದಾನಿ” ಸಿನಿಮೀಯ ಶೈಲಿಯ ನಿರೂಪಣೆಯಲ್ಲಿರುವ ಅದ್ಭುತವಾದ ನಾಟಕ.
✍ ಸುಕೇಶ್ ಕಲ್ಲಮುಂಡ್ಕೂರು