Thursday, April 24, 2025
Homeಮಂಗಳೂರುಅನಿರ್ವೇದ ಸಂಸ್ಥೆಯಿಂದ ವಿಶೇಷ ಅಗತ್ಯತೆಯ ಮಕ್ಕಳಿಗಾಗಿ ʻನೆರವಿನ ಶನಿವಾರʼ ಉಪಕ್ರಮಕ್ಕೆ ಚಾಲನೆ

ಅನಿರ್ವೇದ ಸಂಸ್ಥೆಯಿಂದ ವಿಶೇಷ ಅಗತ್ಯತೆಯ ಮಕ್ಕಳಿಗಾಗಿ ʻನೆರವಿನ ಶನಿವಾರʼ ಉಪಕ್ರಮಕ್ಕೆ ಚಾಲನೆ

ಮಂಗಳೂರು: ನಗರದ ಮಾನಸಿಕ ಯೋಗಕ್ಷೇಮ ಸಂಪನ್ಮೂಲ ಕೇಂದ್ರ ಹಾಗೂ ಸರ್ಕಾರೇತರ ಸಂಸ್ಥೆ ಎನಿಸಿರುವ ʻಅನಿರ್ವೇದʼವು ನಗರದ ವಿಶೇಷ ಅಗತ್ಯತೆಯ ಮಕ್ಕಳಿಗಾಗಿ ಉಚಿತ ಮತ್ತು ಅಂತರ್ಗತ ʻನೆರವಿನ ಶನಿವಾರʼ ಎಂಬ ಉಪಕ್ರಮವನ್ನು ಪ್ರಾರಂಭಿಸಿದೆ.

ಇಫ್ತಿಕಾರ್‌ ಆಲಿ, ಅಧ್ಯಕ್ಷರು, ಕರ್ನಾಟಕದ ಅಲೈಡ್‌ ಮತ್ತು ಹೆಲ್ತ್‌ ಕೇರ್‌ ಕೌನ್ಸಿಲ್‌, ಇವರು ಮಂಗಳವಾರ ಸಂಜೆ ನಗರದಲ್ಲಿ ಅನಿರ್ವೇದದ ವಿಶೇಷ ಅಗತ್ಯತೆಯ ಮಕ್ಕಳ ಕೆಂದ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಉಪಕ್ರಮಕ್ಕೆ ಚಾಲನೆ ನೀಡಿದರು.

ಪ್ರತಿಷ್ಠಾನದ ನಿರ್ದೇಶಕರಾದ ಡಾ. ಕೆ.ಟಿ ಶ್ವೇತಾ ಅವರು ಈ ಕುರಿತು ಮಾಹಿತಿ ನೀಡಿ, ʻನೆರವಿನ ಶನಿವಾರʼ ಉಪಕ್ರಮವು 2025ರ ಮಾರ್ಚ್‌ 29ರಿಂದ ಪ್ರತಿ ಶನಿವಾರದಂದು ಮೋರ್ಗನ್ಸ್‌ ಗೇಟ್‌ ನಲ್ಲಿರುವ ಅನಿರ್ವೇದ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ ಎಂದು ತಿಳಿಸಿದರು. ʻನೆರವಿನ ಶನಿವಾರʼ ಉಪಕ್ರಮವು ಆಟಿಸಂ ಸ್ಪೆಕ್ಟ್ರಮ್‌ ಡಿಸಾರ್ಡರ್‌ (ಎ.ಎಸ್‌.ಡಿ), ಎ.ಡಿ.ಎಚ್‌.ಡಿ, ಕಲಿಕಾ ನ್ಯೂನತೆಗಳು, ಬೌದ್ಧಿಕ ವೈಕಲ್ಯತೆಗಳು ಮತ್ತು ಬೆಳವಣಿಗೆಗೆ ಸಂಬಂಧಿಸಿದ ಇತರ ಸವಾಲುಗಳನ್ನು ಎದುರಿಸುತ್ತಿರುವ ಮಕ್ಕಳಿಗೆ ಸುರಕ್ಷಿತ ಮತ್ತು ಪೋಷಣೆಗೆ ಒತ್ತು ನೀಡುವ ಪರಿಸರವನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಪೋಷಕರು, ಆರೈಕೆ ಒದಗಿಸುವವರು ಮತ್ತು ಸಮುದಾಯದ ಸದಸ್ಯರು ಈ ಉಪಕ್ರಮದಲ್ಲಿ ಪಾಲ್ಗೊಳ್ಳಲು ವಿನಂತಿಸಲಾಗಿದೆ. ಪೋಷಕರ ತರಬೇತಿ ಮತ್ತು ಸಮಾನಸ್ಕಂಧ ನೆರವು ಸಹ ಈ ಮೂಲಕ ಲಭ್ಯವಿದ್ದು, ಸಹಯೋಗದಿಂದ ಕೂಡಿದ ನೆರವು ಜಾಲವನ್ನು ಈ ಮೂಲಕ ರೂಪಿಸಲಾಗುವುದು.

ಮಂಗಳೂರಿನ ವಿಶೇಷ ಅಗತ್ಯತೆಯ ಮಕ್ಕಳ ಸಬಲೀಕರಣಕ್ಕಾಗಿ ನುರಿತ ವೃತ್ತಿಪರರೊಂದಿಗೆ ಕೈಜೋಡಿಸುವುದಕ್ಕಾಗಿ ಸ್ವಯಂಸೇವಕರಾಗಿ ಸೇವೆ ನೀಡಲು ʻನೆರವಿನ ಶನಿವಾರʼ ಉಪಕ್ರಮವು ಸಮುದಾಯದ ಸದಸ್ಯರಿಗೆ ಕರೆ ನೀಡಿದೆ.

ಹೆಚ್ಚಿನ ಮಾಹಿತಿಗಾಗಿ 9482186289 ಕ್ಕೆ ಕರೆ ಮಾಡಿರಿ ಅಥವಾ officialanirvedha@gmail.com ಗೆ ಸಂಪರ್ಕಿಸಿರಿ.

RELATED ARTICLES
- Advertisment -
Google search engine

Most Popular