ಪೆರ್ಲ: ವಿವೇಕಾನಂದ ಶಿಶು ಮಂದಿರದ ವಾರ್ಷಿಕೋತ್ಸವವು ಕಲರವ ಎಂಬ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮದೊಂದಿಗೆ ಜರಗಿತು. ಪೆರ್ಲದ ನಾಲಂದ ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಪದ್ಮಶ್ರೀಪುರಸ್ಕೃತ ಸತ್ಯನಾರಾಯಣ ಬೆಳೇರಿ ಉದ್ಘಾಟಿಸಿದರು. ನಾಲಂದ ಕಾಲೇಜಿನ ಪ್ರ.ಕಾರ್ಯದರ್ಶಿ ಡಾ.ಜಯಗೋವಿಂದ ಉಕ್ಕಿನಡ್ಕ ಅವರು ಸಭೆಯ ಅಧ್ಯಕ್ಷತೆವಹಿಸಿದ್ದರು. ನಾಲಂದ ಕಾಲೇಜಿನ ಗೌರವ ಸಲಹೆಗಾರರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ಟರು ಮುಖ್ಯ ಭಾಷಣಗೈದರು. ಈಸಂದರ್ಭದಲ್ಲಿ ಶಿಶು ಮಂದಿರದ ವತಿಯಿಂದ ಪದ್ಮಶ್ರೀ ಪುರಸ್ಕೃತ ಸತ್ಯನಾರಾಯಣ ಬೆಳೇರಿ ಅವರನ್ನು ಸನ್ಮಾನಿಸಲಾಯಿತು. ಮಕ್ಕಳ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಜರಗಿತು.ರೇಖಾ ಮಾತಾಜಿ ವರದಿ ವಾಚನಗೈದರು. ಕಾರ್ಯದರ್ಶಿ ಹರಿ ಆರ್. ಭರಣೀಕರ್ ಪ್ರಸ್ತಾವನೆ ಪ್ರಸ್ತಾವನೆಗೈದರು. ಶಿಶು ಮಂದಿರದ ಅಧ್ಯಕ್ಷೆ ನಳಿನಿ ಸೈಪಂಗಲ್ಲು ಸ್ವಾಗತಿಸಿ ಮಾತೃಮಂಡಳಿ ಅಧ್ಯಕ್ಷೆ ವೈಷ್ಣವಿ ವಿ.ಸರ್ಪಂಗಳ ವಂದಿಸಿದರು.ಅನಿತಾ ಸೈಪಂಗಲ್ಲು ನಿರೂಪಿಸಿದರು. ಬಳಿಕ ಮಕ್ಕಳಿಂದ ಕಲರವ ಎಂಬ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ಪ್ರದರ್ಶನಗೊಂಡಿತು.