ಶ್ರೀ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನಂ ಉಡುಪಿ ಶ್ರೀ ಕಾಣಿಯೂರು ಮಠ ಕಾಣಿಯೂರು ಕಡಬ ಶ್ರೀ ಕಾಣಿಯೂರು ಮಠದ ಶ್ರೀ ಲಕ್ಷ್ಮೀನರಸಿಂಹ ದೇವರ ಮತ್ತು ಮುಖ್ಯಪ್ರಾಣ ದೇವರ ಪ್ರತಿಷ್ಠಾ ವಾರ್ಷಿಕೋತ್ಸವದ ರಾಯಸ ದಿನಾಂಕ 17-03-2025 ಸೋಮವಾರ ನಡೆಯಲಿದೆ.
ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಉಡುಪಿ ಶ್ರೀ ಕಾಣಿಯೂರು ರಾಮತೀರ್ಥ ಮಠ ಕಾಣಿಯೂರು ಇವರ ಆದೇಶದಂತೆ ಹಾಗೂ ಇವರ ದಿವ್ಯ ಉಪಸ್ಥಿತಿಯಲ್ಲಿ ದಿನಾಂಕ: 17.03.2025 ಸೋಮವಾರ ಶ್ರೀ ಲಕ್ಷ್ಮೀನರಸಿಂಹ ದೇವರ ಮತ್ತು ಶ್ರೀ ಮುಖ್ಯಪ್ರಾಣ ದೇವರ ಪ್ರತಿಷ್ಠಾ ವಾರ್ಷಿಕೋತ್ಸವವು ಜರಗಲಿರುವುದು.
ಧಾರ್ಮಿಕ ಕಾರ್ಯಕ್ರಮಗಳು ದಿನಾಂಕ 14.03.2025ನೇ ಶುಕ್ರವಾರ 9.00 ಗಂಟೆಗೆ ಗೊನೆ ಕಡಿಯುವುದು. ದಿನಾಂಕ 16.03.2025 ರವಿವಾರ 4.00 ಗಂಟೆಗೆ ಹಸಿರು ಕಾಣಿಕೆ ಸಮರ್ಪಣೆ, ತೋರಣ ಮೂಹೂರ್ತ. ದಿನಾಂಕ 17.03.2025 ಸೋಮವಾರ der 5.00 ಗಂಟೆಯಿಂದ ನರಸಿಂಹ ಹೋಮ, ನರಸಿಂಹ ದೇವರಿಗೆ ನವಕ ಕಲಶಾಭಿಷೇಕ, ದುರ್ಗಾಹೋಮ ಕಾ 12 ಕಾಯಿ ಗಣಹೋಮ, ಆಶ್ಲೇಷಾ ಬಲಿ .ಬೆಳಿಗ್ಗೆ ಗಂಟೆ 9.00ರಿಂದ ಭಜನಾ ಕಾರ್ಯಕ್ರಮ. ಶ್ರೀ ಲಕ್ಷ್ಮೀ ನರಸಿಂಹ ಯುವಕ ಮಂಡಲ ಕಾಣಿಯೂರು ಇವರಿಂದ ಬೆಳಿಗ್ಗೆ ಗಂಟೆ 10.00ರಿಂದ ಶ್ರೀ ಕಾಣಿಯೂರು ಮಠ ಸಂಸ್ಥಾನ ದೇವರಿಗೆ ಪೂಜೆ ಮಧ್ಯಾಹ್ನ ಗಂಟೆ 11.00ರಿಂದ ಸಾಂಸ್ಕೃತಿಕ ಕಾರ್ಯಕ್ರನು ಶ್ರೀ ಯಳ್ಳೇಶ್ ಆಚಾರ್ಯ ಹೊಸಬೆಟ್ಟು ಇವರ ಹನುಮದ್-ವಿಲಾಸ ಚೂಡಾಮಣಿ ಹರಿಕಥೆ ನಡೆಯಲಿದೆ ಮತ್ತು ಮಧ್ಯಾಹ್ನ ಗಂಟೆ 12.00ಕ್ಕೆ ಮಹಾಪೂಜೆ. ಮಧ್ಯಾಹ್ನ ಗಂಟೆ 12.30ಕ್ಕೆ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಕಾಣಿಯೂರು ಮಠ ಇವರಿಂದ ಆಶೀರ್ವಚನ ಹಾಗೂ ಫಲ ಮಂತ್ರಾಕ್ಷತೆ ಮಧ್ಯಾಹ್ನ ಗಂಟೆ 1.00ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿದೆ.